ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿದ ನಂತರ ನನ್ನನ್ನು ತೆಗೆದುಕೊಳ್ಳುತ್ತಾರೆ: ಶಾಸಕ ಯತ್ನಾಳ್
ವಿಜಯಪುರ: ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿದ ನಂತರ ನನ್ನನ್ನು ತೆಗೆದುಕೊಳ್ಳುತ್ತಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ಹೊರಹಾಕಿದ ತಕ್ಷಣ ಮುಗಿದೋಯ್ತು. ಇನ್ನು ಬಿಜೆಪಿಗೆ ಬರಲ್ಲ ಅಂತಾ ಕೆಲವರು ತಿಳಿದುಕೊಂಡಿದ್ದಾರೆ ಎಂದು ಹುಚ್ಚರು. ಹೈಕಮಾಂಡ್ ನಿರಂತರ ನನ್ನ ಸಂಪರ್ಕದಲ್ಲಿದೆ. ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿದ ನಂತರ ನನ್ನನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಇನ್ನೂ ದೇಶದ ಜನರು ಅಂಜಬಾರದು, ನಮ್ಮ ಹತ್ತಿರ ಕೂಡ ಅಣುಬಾಂಬ್ ಇದೆ. ಕೇವಲ ನಮ್ಮ ಒಂದು ಬ್ರಹ್ಮೋಸ್ ಇದ್ದರೆ ಸಾಕು ಪಾಕಿಸ್ತಾನ ನಾಶ ಮಾಡಬಹುದು. ಪ್ರಧಾನಮಂತ್ರಿಗಳು ಇದೇ ರೀತಿ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು. ಅವರು ಇದೇ ರೀತಿ ಇದ್ದರೆ ಪ್ರಧಾನಿಗಳ ಮೇಲೆ ವಿಶ್ವಾಸ ಉಳಿಯುತ್ತದೆ. ಒಂದು ಹೆಜ್ಜೆ ಹಿಂದೆ ಸರಿದರೂ ಕೂಡ ಸರಿಯಾಗಲ್ಲ. ಹಿಂದೂಗಳನ್ನು ರಕ್ಷಣೆ ಮಾಡುತ್ತೀವಿ ಎಂಬ ಕಾರಣಕ್ಕೆ ಹಿಂದೂಗಳು ಬಿಜೆಪಿಗೆ, ಮೋದಿಯವರಿಗೆ ಮತ ಹಾಕುತ್ತಾರೆ. ಹೀಗಾಗಿ ನಾವು ಹಿಂದೆ ಸರಿದರೆ ಸರಿಯಿರಲ್ಲ ಎಂದರು.