ಇಂದು ವಿಧಾನಮಂಡಲದ ಕಲಾಪ ಆರಂಭವಾಗುತ್ತಿದ್ದಂತೆ ಕಳೆದ ಶುಕ್ರವಾರದಂದು ಶಾಸಕಾಂಗ ಪಕ್ಷದ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕ್ರಿಯಾಲೋಪದ ಬಗ್ಗೆ ಉಲ್ಲೇಖಿಸಿದ್ದಾರೆ. ಆ ಬಗ್ಗೆ ಚರ್ಚೆ ನಡೆಸೋಣ ಎಂದು ಹೇಳುತ್ತಾ ರೂಲಿಂಗ್ ಗೆ ಸೂಚಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಬಿಜೆಪಿಯ ಮಾಧುಸ್ವಾಮಿಯವರು ಇಂದೇ ವಿಶ್ವಾಸಮತ ಸಾಭೀತು ಪಡಿಸಲು ಸೂಚಿಸುವಂತೆ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಮನವಿ ಮಾಡಿದರು.
ಮಾಧುಸ್ವಾಮಿಯವರ ಮನವಿ ಬಳಿಕ, ಬಿಜೆಪಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತನಾಡಿ, ಸ್ಪೀಕರ್ ಅವರು ತಾವು ವಿಶ್ವಾಸಮತ ಸಾಭೀತು ಪಡಿಸುವ ಬಗ್ಗೆ ಇಂದು ಕೊನೆಯ ಪಕ್ಷ ಸಮಯವನ್ನು ಆದರೂ ನಿಗದಿ ಮಾಡಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ಅವರಲ್ಲಿ ಮನವಿ ಮಾಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಪೀಕರ್ ರಮೇಶ್ ಕುಮಾರ್, ನಿಮ್ಮ ಮಾತೇ ನನ್ನ ಮಾತಾಗಿದೆ. ಇಂದೇ ವಿಶ್ವಾಸಮತ ಯಾಚನೆಯ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.