ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಳಿಯ ವಿಶಗನ್ ತಮ್ಮ ಮಡದಿ ಸೌಂದರ್ಯರನ್ನು ಭೇಟಿ ಮಾಡಲು ಲಂಡನ್‌ಗೆ ತರಳಿದ್ದರು. ಈ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಅವರ ಬ್ಯಾಗ್ ನಾಪತ್ತೆಯಾಗಿದೆ. ಬ್ಯಾಗ್‌ನಲ್ಲಿ ಅವರ ಪಾಸ್‌ಪೋರ್ಟ್, ಬೆಲೆಬಾಳುವ ಕೈಗಡಿಯಾರ, ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಹಾಗೂ ವಿದೇಶೀ ಕರೆನ್ಸಿ ಇದ್ದು, ವಿಶ್ವದ ಅತ್ಯಂತ ಸುರಕ್ಷಿತ ವಿಮಾನ ನಿಲ್ದಾಣಗಳಲ್ಲಿ ಒಂದು ಎಂಬ ಪ್ರತಿಷ್ಠೆಯ ವಿಮಾನ ನಿಲ್ದಾಣದಲ್ಲೇ ಕಳುವಾಗಿದೆ.
ಆಗ ಅವರು ಪೊಲೀಸರೊಡನೆ ಸಿಸಿ ಕೆಮರಾ ಪರಿಶೀಲನೆ ಮಾಡಲು ಹೋದಾಗ ವಿಮಾನ ನಿಲ್ದಾಣದ CC TV ವ್ಯವಸ್ಥೆ ಸರಿಯಾಗಿ ಕೆಲಸ ಮಾಡದೇ ಇರುವುದು ತಿಳಿಯುತ್ತದೆ ಆಗ ಪೊಲೀಸರು ವಿಶಗನ್ ಗೆ ತಮ್ಮ ‘Find my iPhone’ ಆಯ್ಕೆಯನ್ನು ಆಕ್ಟಿವೇಟ್ ಮಾಡಿಕೊಳ್ಳಲು ಸೂಚಿಸಿದ್ದಾರೆ. ಪೊಲೀಸರು ಆ ಬ್ಯಾಗ್ ನ ಹುಡುಕಾಟದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ .