ವಿಶ್ವಕಪ್ ನ ಚೊಚ್ಚಲ ಪಂದ್ಯದ ಮೊದಲ ಬೌಲ್ ನಲ್ಲಿ ವಿಜಯ್ ಶಂಕರ್ ಕಮಾಲ್ ಮಾಡಿದ್ದಾರೆ. ವಿಶ್ವಕಪ್ ನಲ್ಲಿ ವಿಜಯ್ ಶಂಕರ್ ಎರಡು ದಾಖಲೆ ಬರೆದಿದ್ದಾರೆ. ಪಾಕಿಸ್ತಾನದ ವಿರುದ್ಧ ವಿಶ್ವಕಪ್ ಗೆ ಪದಾರ್ಪಣೆ ಮಾಡಿದ ವಿಜಯ್ ಶಂಕರ್ ಮೊದಲ ಬಾಲ್ ನಲ್ಲಿ ವಿಕೆಟ್ ಪಡೆದು ದಾಖಲೆ ಬರೆದಿದ್ದಾರೆ.
ವಿಶ್ವಕಪ್ ಮೊದಲ ಪಂದ್ಯದಲ್ಲಿ ಮೊದಲ ಬಾಲ್ ನಲ್ಲಿ ವಿಕೆಟ್ ಕಬಳಿಸಿದ ಭಾರತದ ಮೊದಲ ಆಟಗಾರರಾಗಿದ್ದಾರೆ ವಿಜಯ್ ಶಂಕರ್. ವಿಶ್ವದಲ್ಲಿ ಮೂರನೇ ಆಟಗಾರರಾಗಿದ್ದಾರೆ. ವಿಜಯ್ ಶಂಕರ್ ಗಿಂತ ಮೊದಲು ಬರ್ಮುಡಾ ಹಾಗೂ ಆಸ್ಟ್ರೇಲಿಯಾ ಆಟಗಾರರು ಈ ದಾಖಲೆ ಬರೆದಿದ್ದಾರೆ.
ಮ್ಯಾಚ್ ವೇಳೆ ಭುವನೇಶ್ವರ್ ಕುಮಾರ್ ಗಾಯಗೊಂಡಿದ್ದರು. ಐದನೇ ಓವರ್ ನಡೆಯುತ್ತಿತ್ತು. ಮೊಣಕೈ ಗಾಯದಿಂದ ಬಳಲಿದೆ ಭುವನೇಶ್ವರ್ ಮೈದಾನದಿಂದ ಹೊರಗೆ ಹೋದ್ರು. ಆಗ ಕೊಹ್ಲಿ, ವಿಜಯ್ ಶಂಕರ್ ಗೆ ಬೌಲ್ ನೀಡಿದ್ದರು.