ಯಾರಿಗೆ ತಾನೆ ನಾನು ಶ್ರೀಮಂತನಾಗಬೆಕೆಂದು ಎನಿಸುವುದಿಲ್ಲ ಹೇಳಿ ? ಹಾಗೆ ಅದಕ್ಕೆ ನಾವು ಎಷ್ಟು ಶ್ರಮ ಪಡುತ್ತೇವೆ ಎನ್ನುವುದು ಮುಖ್ಯ ಹಾಗೆ ಪ್ರಪಂಚದಲ್ಲೆ ಅತ್ಯಂತ ಶ್ರೀಮಂತನಾಗಬೇಕಾದರೆ ಅದಕ್ಕೆ ಅವರ ಕೆಲಸ ಶ್ರಮ ಅಷ್ಟೇ ಇರುತ್ತದೆ ಇದೀಗ ಅತ್ಯಂತ ಶ್ರೀಮಂತ ಮುಖೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಮಾರುಕಟ್ಟೆ ಮೌಲ್ಯ ಏರಿಕೆಯಾಗುತ್ತಿದ್ದಂತೆ ಮುಖೇಶ್ ಅಂಬಾನಿಯವರ ಸಂಪತ್ತಿನಲ್ಲೂ ಏರಿಕೆ ಕಂಡು ಬಂದಿದ್ದು, ಒಂದೇ ದಿನ 3,800 ಕೋಟಿ ರೂಪಾಯಿಗಳಷ್ಟು ಏರಿಕೆಯಾಗಿದೆ.
ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮುಖೇಶ್ ಅಂಬಾನಿ, ಏಷ್ಯಾದ ಅತಿ ಸಿರಿವಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಅವರ ಆಸ್ತಿ ಮೌಲ್ಯ 4.30 ಲಕ್ಷ ಕೋಟಿ ರೂಪಾಯಿಗಳೆಂದು ಹೇಳಲಾಗಿದೆ.