ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ವಿಶ್ವನಾಥ್ ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಸೇರೋದು ಬಹುತೇಕ ಖಚಿತ ಆಗ್ತಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಬಹಿರಂಗವಾಗಿ ಸರ್ಕಾವನ್ನು ಟೀಕಿಸುತ್ತಿದ್ದ ಹೆಚ್. ವಿಶ್ವನಾಥ್, ಅಲ್ಲೊಮ್ಮೆ ಇಲ್ಲೊಮ್ಮೆ ಬಿಜೆಪಿ ನಾಯಕರನ್ನು ಸ್ನೇಹದ ಹೆಸರಲ್ಲಿ ಭೇಟಿ ಮಾಡಿ ಚರ್ಚೆ ನಡೆಸುತ್ತಿದ್ರು.
ಶ್ರೀನಿವಾಸ್ ಪ್ರಸಾದ್ ನಿವಾಸದಲ್ಲಿ ಆಪರೇಷನ್ ರೂವಾರಿಗಳಾದ ಸಿ.ಪಿ ಯೋಗೇಶ್ವರ್ ಹಾಗೂ ಬಿ.ಎಸ್ ಯಡಿಯೂರಪ್ಪ ಆಪ್ತ ಸಂತೋಷ್ ಜೊತೆಗೂ ಗೌಪ್ಯ ಮಾತುಕತೆ ನಡೆಸಿದ್ರು. ಇದೀಗ ವಿಶ್ವನಾಥ್ ಹೆಜ್ಜೆ ಕಮಲ ಪಥಕ್ಕೆ ಚಲಿಸುತ್ತಿರೋದು ಹೆಚ್ಚು ಕಡಿಮೆ ಬಹಿರಂಗವಾಗುವ ಕಾಲ ಸನಿಹ ಆಗ್ತಿದೆ. ಗೌಹಾತಿಯ ಕಾಮಾಕ್ಯ ದೇವಸ್ಥಾನಕ್ಕೆ ತೆರಳಿದ್ದ ಹೆಚ್.