ವಿಶ್ವವಿಖ್ಯಾತ ಬೆಂಗಳೂರು ಕರಗ ಉತ್ಸವಕ್ಕೆ ಇಂದು ಚಾಲನೆ!

Date:

ವಿಶ್ವವಿಖ್ಯಾತ ಬೆಂಗಳೂರು ಕರಗ ಉತ್ಸವಕ್ಕೆ ಇಂದು ಚಾಲನೆ!

ಬೆಂಗಳೂರು: ವಿಶ್ವವಿಖ್ಯಾತ ಬೆಂಗಳೂರು ಕರಗ ಉತ್ಸವಕ್ಕೆ ಇಂದು ಅಧಿಕೃತ ಚಾಲನೆ ದೊರೆಯಲಿದೆ.
ನಗರದ ತಿಗಳರಪೇಟೆಯ ಶ್ರೀ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ಇಂದು ಸಂಜೆ ಧ್ವಜಾರೋಹಣ ನೆರವೇರಲಿದ್ದು, ಇದರೊಂದಿಗೆ 11 ದಿನಗಳ ಕರಗ ಮಹೋತ್ಸವ ಆರಂಭವಾಗಲಿದೆ.
ಈ ಉತ್ಸವವು ಒಟ್ಟು 11 ದಿನಗಳ ಕಾಲ ನಡೆಯಲಿದ್ದು, ಮಾರ್ಚ್ 30ರಂದು ಹಸಿ ಕರಗ ನಡೆಯಲಿದೆ. ಏಪ್ರಿಲ್ 1ರಂದು ಮಧ್ಯರಾತ್ರಿ ಕರಗ ಶಕ್ತ್ಯೋತ್ಸವ ನಡೆಯಲಿದ್ದು, ಇದೇ ದಿನ ದ್ರೌಪದಿ ದೇವಿಯ ಹೂವಿನ ಕರಗ ಸಂಚರಿಸಿ ಲಕ್ಷಾಂತರ ಭಕ್ತರಿಗೆ ದರ್ಶನ ನೀಡಲಿದೆ.
ಈ ಬಾರಿಯ ಕರಗವನ್ನು ಎ. ಜ್ಞಾನೇಂದ್ರ ಸ್ವಾಮಿ ಹೊರುವುದಾಗಿ ತಿಳಿದುಬಂದಿದೆ. ಕಳೆದ ವರ್ಷ 15ನೇ ಬಾರಿ ಯಶಸ್ವಿಯಾಗಿ ಕರಗ ಹೊತ್ತಿದ್ದ ಅವರು, ಈ ಬಾರಿ 16ನೇ ಬಾರಿ ಕರಗ ಹೊರುವ ಮೂಲಕ ವಿಶೇಷ ಗಮನ ಸೆಳೆಯುತ್ತಿದ್ದಾರೆ.
ಸುಮಾರು 10 ಲಕ್ಷಕ್ಕೂ ಅಧಿಕ ಭಕ್ತರು ಈ ಉತ್ಸವದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಕರಗ ಶಕ್ತ್ಯೋತ್ಸವದ ಹಿನ್ನೆಲೆ ಇಂದು ಸುದ್ದಿಗೋಷ್ಠಿ ನಡೆಯಲಿದ್ದು, ಉತ್ಸವದ ಸಿದ್ಧತೆಗಳ ಕುರಿತು ಮಾಹಿತಿ ನೀಡಲಾಗುತ್ತದೆ.

Share post:

Subscribe

spot_imgspot_img

Popular

More like this
Related

ಏಪ್ರಿಲ್ 1ರಿಂದ ಕರ್ನಾಟಕದಲ್ಲಿ ಟೋಲ್ ದರ ಏರಿಕೆ: ವಾಹನ ಸವಾರರಿಗೆ ಹೆಚ್ಚುವರಿ ಹೊರೆ

ಏಪ್ರಿಲ್ 1ರಿಂದ ಕರ್ನಾಟಕದಲ್ಲಿ ಟೋಲ್ ದರ ಏರಿಕೆ: ವಾಹನ ಸವಾರರಿಗೆ ಹೆಚ್ಚುವರಿ...

ನಿಮ್ಮಲ್ಲಿ ಈ ಲಕ್ಷಣಗಳಿವೆಯಾ? ಡೌಟೇ ಬೇಡ – ಇದು ಥೈರಾಯ್ಡ್ ಸಮಸ್ಯೆಯ ಸೂಚನೆ!

ನಿಮ್ಮಲ್ಲಿ ಈ ಲಕ್ಷಣಗಳಿವೆಯಾ? ಡೌಟೇ ಬೇಡ – ಇದು ಥೈರಾಯ್ಡ್ ಸಮಸ್ಯೆಯ...

ಗುಡ್‌ ನ್ಯೂಸ್: ಭಾರೀ ಇಳಿಕೆ ಕಂಡ ಬಂಗಾರ! ಬೆಂಗಳೂರಿನಲ್ಲಿ ಇಂದಿನ ಚಿನ್ನ -‌ ಬೆಳ್ಳಿ ಬೆಲೆ ಎಷ್ಟಿದೆ?

ಗುಡ್‌ ನ್ಯೂಸ್: ಭಾರೀ ಇಳಿಕೆ ಕಂಡ ಬಂಗಾರ! ಬೆಂಗಳೂರಿನಲ್ಲಿ ಇಂದಿನ ಚಿನ್ನ...

ಹೋಟೆಲ್ ಮಾಲೀಕರಿಗೆ ಗುಡ್ ನ್ಯೂಸ್: ಹೆಚ್ಚುವರಿಯಾಗಿ 1 ಸಾವಿರ ಕಮರ್ಷಿಯಲ್ ಸಿಲಿಂಡರ್ ಪೂರೈಕೆ – ಕೆ.ಹೆಚ್. ಮುನಿಯಪ್ಪ

ಹೋಟೆಲ್ ಮಾಲೀಕರಿಗೆ ಗುಡ್ ನ್ಯೂಸ್: ಹೆಚ್ಚುವರಿಯಾಗಿ 1 ಸಾವಿರ ಕಮರ್ಷಿಯಲ್ ಸಿಲಿಂಡರ್...