No menu items!
7.9 C
Munich
Wednesday, April 15, 2026

ನಿಮ್ಮಲ್ಲಿ ಈ ಲಕ್ಷಣಗಳಿವೆಯಾ? ಡೌಟೇ ಬೇಡ – ಇದು ಥೈರಾಯ್ಡ್ ಸಮಸ್ಯೆಯ ಸೂಚನೆ!

Must read

ನಿಮ್ಮಲ್ಲಿ ಈ ಲಕ್ಷಣಗಳಿವೆಯಾ? ಡೌಟೇ ಬೇಡ – ಇದು ಥೈರಾಯ್ಡ್ ಸಮಸ್ಯೆಯ ಸೂಚನೆ!

ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಿದೆ. ಹಿಂದೆ ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತಿದ್ದ ಈ ಸಮಸ್ಯೆ, ಈಗ ಲಕ್ಷಾಂತರ ಜನರನ್ನು ಸಮಿಸುತ್ತಿದೆ ಎಂದು ಸಮೀಕ್ಷೆಗಳು ಸೂಚಿಸುತ್ತವೆ. ತಜ್ಞರ ಪ್ರಕಾರ, ಯಾವುದೇ ರೋಗವು ಬರುವ ಮೊದಲು ದೇಹ ಕೆಲವು ಸೂಚನೆಗಳನ್ನು ನೀಡುತ್ತದೆ. ಈ ಲಕ್ಷಣಗಳನ್ನು ಮೊದಲ ಹಂತದಲ್ಲೇ ಗುರುತಿಸಿದರೆ ಸಮಸ್ಯೆಯನ್ನು ನಿಯಂತ್ರಿಸಬಹುದು.
ಥೈರಾಯ್ಡ್ ಸಮಸ್ಯೆಯ ಪ್ರಮುಖ ಲಕ್ಷಣಗಳಲ್ಲಿ ಚರ್ಮದ ಶುಷ್ಕತೆ, ತುರಿಕೆ, ಬೆವರು ಕಡಿಮೆ ಆಗುವುದು ಸೇರಿವೆ. ಜೊತೆಗೆ ಹೆಚ್ಚುವರಿ ಕೂದಲು ಉದುರುವಿಕೆಯೂ ಗಮನಿಸಬೇಕಾದ ಅಂಶವಾಗಿದೆ. ಹಾರ್ಮೋನ್ ಅಸಮತೋಲನದಿಂದ ಲೈಂಗಿಕ ಆಸಕ್ತಿ ಕಡಿಮೆಯಾಗುವುದು ಸಹ ಕಾಣಿಸಬಹುದು.
ತೂಕದಲ್ಲಿ ಏಕಾಏಕಿ ಬದಲಾವಣೆ ಕೂಡ ಥೈರಾಯ್ಡ್ ಸಮಸ್ಯೆಯ ಸೂಚನೆಯಾಗಿರಬಹುದು. ಯಾವುದೇ ಕಾರಣವಿಲ್ಲದೆ ತೂಕ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು ಕಂಡುಬಂದರೆ ಎಚ್ಚರಿಕೆಯಿಂದಿರಬೇಕು. ಮನಸ್ಥಿತಿಯಲ್ಲೂ ಬದಲಾವಣೆ ಉಂಟಾಗಿ, ಕೋಪ, ದಣಿವು ಮತ್ತು ಖಿನ್ನತೆ ಕಾಣಿಸಬಹುದು.
ಇದಕ್ಕೆ ಜೊತೆಗೆ ಕೈ-ಕಾಲುಗಳ ನಡುಕ, ಅತಿಯಾದ ಬೆವರು, ಜೀರ್ಣಕ್ರಿಯೆ ಸಮಸ್ಯೆಗಳು, ವಿಶೇಷವಾಗಿ ಮಲಬದ್ಧತೆ ಕೂಡ ಕಾಣಿಸಬಹುದು. ಕೆಲವೊಮ್ಮೆ ಹೃದಯ ಬಡಿತ ಹೆಚ್ಚಾಗುವುದು, ಎದೆನಡುಕ ಅನುಭವವಾಗುವುದು ಕೂಡ ಲಕ್ಷಣಗಳಾಗಿವೆ. ದೃಷ್ಟಿ ಮಸುಕಾಗುವುದು, ಹೆಚ್ಚು ನಿದ್ರೆ ಅಥವಾ ಅಲಸ್ಯ ಕಾಣಿಸಿಕೊಳ್ಳುವುದು ಸಹ ಥೈರಾಯ್ಡ್ ಸಮಸ್ಯೆಯ ಸೂಚನೆಗಳಾಗಿವೆ.
ಈ ರೀತಿಯ ಯಾವುದೇ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ. ಥೈರಾಯ್ಡ್ ಸಮಸ್ಯೆ ದೃಢಪಟ್ಟರೆ, ವೈದ್ಯರ ಸಲಹೆಯಂತೆ ಔಷಧಿಗಳನ್ನು ತೆಗೆದುಕೊಳ್ಳುವುದು ಸುರಕ್ಷಿತವಾಗಿದೆ.

- Advertisement -spot_img

More articles

- Advertisement -spot_img

Latest article