ವಿಶ್ವಾಸಮತ ಯಾಚನೆ ವಿಳಂಬಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಪಾಲ ವಿ.ಆರ್. ವಾಲಾ ಅವರಿಗೆ ದೂರು ನೀಡಿ, ಮಧ್ಯಪ್ರವೇಶಿಸಿ, ಕೂಡಲೇ ವಿಶ್ವಾಸಮತ ಯಾಚಿಸುವಂತೆ ಸರ್ಕಾರಕ್ಕೆ ಸೂಚಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತ ಪಕ್ಷದವರೇ ಕ್ರಿಯಾ ಲೋಪ ಎತ್ತಲು ಬರುವುದಿಲ್ಲ. ಆದರೂ ಸಿದ್ದರಾಮಯ್ಯ ಕ್ರಿಯಾಲೋಪ ಎತ್ತಿದರು.ಇದಕ್ಕೆ ಪೂರಕವಾಗಿ ಕಾಂಗ್ರೆಸ್ ನ ಹೆಚ್.ಕೆ. ಪಾಟೀಲ್ ಮತ್ತು ಕೃಷ್ಣ ಬೈರೇಗೌಡ ಅವರು ಕೂಡ ಕ್ರಿಯಾಲೋಪದ ಬಗ್ಗೆ ಹೆಚ್ಚಿನ ಚರ್ಚೆ ಮಾಡಿಸಲು ಯತ್ನಿಸಿದರು. ಇದೆಲ್ಲವನ್ನೂ ಗಮನಿಸಿದಾಗ ವಿಶ್ವಾಸಮತ ಯಾಚನೆಯನ್ನು ವಿಳಂಬಿಸುವ ತಂತ್ರ ಎಂಬುದು ಸ್ಪಷ್ಟವಾಗುತ್ತದೆ ಎಂದರು.