ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ, ವಿಧಾನಸೌಧದಲ್ಲಿ ಇಂದು ಬಹುಮತ ಸಾಬೀತುಪಡಿಸಿದ್ದಾರೆ.
ಇಂದು ಬೆಳಿಗ್ಗೆ ಸದನ ಆರಂಭವಾಗುತ್ತಿದ್ದಂತೆ ಸ್ಪೀಕರ್ ರಮೇಶ್ ಕುಮಾರ್, ಮುಖ್ಯಮಂತ್ರಿ ಯಡಿಯೂರಪ್ಪನವರು ವಿಶ್ವಾಸಮತ ಕೋರಲು ಅನುಮತಿ ನೀಡಿದರು. ಬಳಿಕ ಮಾತನಾಡಿದ ಯಡಿಯೂರಪ್ಪನವರು ತಮಗೆ ಮುಖ್ಯಮಂತ್ರಿಯಾಗಲು ಸಿಕ್ಕಿರುವ ಅವಕಾಶ ಈ ರಾಜ್ಯದ ಜನತೆಯ ಆಶೀರ್ವಾದವೆಂದರು.ಧ್ವನಿಮತದ ಆಧಾರದ ಮೇಲೆ ವಿಶ್ವಾಸಮತ ಯಾಚನೆ ನಡೆದಿದ್ದು, ಯಡಿಯೂರಪಪ್ಪ ಬಹುಮತ ಗಳಿಸಿದ್ದಾರೆ. ಇದರಿಂದಾಗಿ ಮುಂದಿನ 6 ತಿಂಗಳ ಕಾಲ ಸರ್ಕಾರ ಸೇಫ್ ಆಗಿರಲಿದೆ.