ಕಲಾಪ ಸಲಹಾ ಸಮಿತಿ ಸಭೆ ಮುಕ್ತಾಯಗೊಂಡಿದೆ. ಗುರುವಾರ ವಿಶ್ವಾಸ ಮತ ಯಾಚನೆಗೆ ಮುಹೂರ್ತ ಫಿಕ್ಸ್ ಆಗಿದೆ. ಬೆಳಿಗ್ಗೆ 11 ಗಂಟೆಗೆ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.
ಕಲಾಪ ಸಲಹಾ ಸಮಿತಿಯಲ್ಲಿ ಮೂರು ಪಕ್ಷದ ಮುಖಂಡರು ಪಾಲ್ಗೊಂಡಿದ್ದರು. ವಿಶ್ವಾಸಮತ ಯಾಚನೆಗೆ ದಿನಾಂಕ ನಿಗದಿ ಮಾಡಬೇಕೆಂದು ಬಿಜೆಪಿ ಪಟ್ಟು ಹಿಡಿದಿತ್ತು. ನಾಳೆ ಸುಪ್ರೀಂ ಕೋರ್ಟ್ ತೀರ್ಪು ಬರಲಿ. ನಂತ್ರ ದಿನಾಂಕ ನಿಗದಿ ಮಾಡೋಣ ಎಂದು ಸ್ಪೀಕರ್ ಹೇಳಿದ್ದರು.
ಚರ್ಚೆ ನಂತ್ರ ಕೊನೆಗೂ ದಿನಾಂಕ ನಿಗದಿ ಪಡಿಸಲಾಗಿದೆ. ಗುರುವಾರ 11 ಗಂಟೆಗೆ ವಿಶ್ವಾಸಮತ ಯಾಚನೆ ನಡೆಯಲಿದೆ. ನಾಳೆ ಸುಪ್ರೀಂ ತೀರ್ಪು ಬರಲಿದೆ. ನಂತ್ರ ಬುಧವಾರವೊಂದು ಸರ್ಕಾರಕ್ಕೆ ಅವಕಾಶ ಸಿಗಲಿದೆ. ಇದು ಸರ್ಕಾರಕ್ಕೆ ಸ್ವಲ್ಪ ರಿಲೀಫ್ ಎನ್ನಬಹುದು.
ವಿಧಾನ ಪರಿಷತ್ ನಲ್ಲಿ ಇದೇ ವಿಚಾರಕ್ಕೆ ಗಲಾಟೆ ನಡೆದಿತ್ತು.ವಿಶ್ವಾಸಮತ ಯಾಚನೆ ನಂತ್ರ ಕಲಾಪ ನಡೆಸಿ ಎಂದು ಗಲಾಟೆ ಮಾಡಿದ ಕಾರಣ ವಿಧಾನಪರಿಷತ್ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ