ವಿಧಾನಸೌಧದಲ್ಲಿ ಶುಕ್ರವಾರ ಮಾತನಾಡಿದ ಅವರು ಇನ್ನೂ ನಮ್ಮ ಶಾಸಕರು ಮಾತನಾಡುವ ಲಿಸ್ಟ್ ಇದೆ. ಸದಸ್ಯರ ಹಕ್ಕುಗಳನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ. ವಿಶ್ವಾಸ ಮತ ಯಾಚನೆ ಮುಗಿಸಲು ಸಮಯದ ನಿರ್ಬಂಧ ಇಲ್ಲ ಎಂದರು.
ವಾಜಪೇಯಿ ಕೂಡ 9 ದಿನ ತೆಗೆದುಕೊಂಡ ನಿದರ್ಶನ ಇದೆ. ನಾವೇನು ಓಡಿ ಹೋಗಲ್ಲ, ಸದನದ ಕಲಾಪ ಅಂತಿಮವಾಗಿತ್ತದೆ. ವಿರೋಧ ಪಕ್ಷದವರಿಗೆ ಬೇಗ ಮುಗಿಸಲು ಬಯಸುತ್ತಿದ್ದಾರೆ, ನಮಗೂ ಮುಗಿಸಬೇಕೆಂಬ ಭಾವನೆ ಇದೆ ಎಂದರು.