ಬಿಎಸ್‍ವೈ ನಿವಾಸದ ಬಳಿ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ನಾಳೆ ಬಹುಮತ ಸಾಬೀತು ಮಾಡಿ ವಿಶ್ವಾಸ ಮತದಲ್ಲಿ ನಾವು ಗೆದ್ದೇ ಗೆಲ್ತೇವೆ ಅನ್ನೋ ಭರವಸೆ ಇದೆ.
ಬಹುಮತ ಸಾಬೀತು ಮಾಡಿದ ನಂತರ ಮುಂದಿನ ಐದಾರು ತಿಂಗಳಲ್ಲಿ ಬಿಜೆಪಿ ಬಹುಮತದ ಸರ್ಕಾರವಾಗಿ ಮೂಡಿ ಬಂದು ರಾಜ್ಯದ ಅಭಿವೃದ್ಧಿಗೆ ಪೂರಕವಾದ ಸರ್ಕಾರದ ರಚನೆ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.
ಹಾಗೆ ಇಂದು ಸಭೆ ಕರೆದಿದ್ದು ಇದರಲ್ಲಿ ಸಿಎಂ ಯಡಿಯೂರಪ್ಪ, ನಾಯಕರು ಭಾಗಿಯಾಗಿ ನಾಳೆ ಅಧಿವೇಶನದಲ್ಲಿ ಶಾಸಕರು ಹೇಗೆ ನಡೆದುಕೊಂಡು ಹೋಗಬೇಕು ಎಂಬುದರ ಬಗ್ಗೆ ಚರ್ಚೆ ನಡೆಯಲಿದೆ.ಡಿಸಿಎಂ ಹುದ್ದೆ ಬಗ್ಗೆ ಹೈಕಾಂಮಾಡ್ ನಿರ್ಧಾರ ಮಾಡುತ್ತಾದೆ ಎಂದರು