ವೀರೇಂದ್ರ ಸೆಹ್ವಾಗ್ ರಾಜಕೀಯ ಎಂಟ್ರಿಗೆ ಸಕಲ ತಯಾರಿ..!! ಯಾವ ಪಕ್ಷ..? ಯಾವ ಕ್ಷೇತ್ರ ಗೊತ್ತಾ..?
ಭಾರತ ಕ್ರಿಕೆಟ್ ತಂಡ ಕಂಡ ಸ್ಪೋಟಕ ಆಟಗಾರ ವೀರೇಂದ್ರ ಸೆಹ್ವಾಗ್ ಈ ಬಾರಿ ನಡೆಯಲಿರುವ ಲೋಕಸಭಾ ಎಲೆಕ್ಷನ್ ನಲ್ಲಿ ಸ್ಪರ್ಧಿಸಲ್ಲಿದ್ದಾರೆ ಎನ್ನಲಾಗ್ತಿದೆ..ಹರಿಯಾಣದ ರೋಹತಕ್ ಲೋಕಸಭಾ ಕ್ಷೇತ್ರದಿಂದ ವೀರು ಸ್ಪರ್ಧೆ ಖಚಿತ ಎನ್ನಲಾಗ್ತಿದೆ..
ಬಿಜೆಪಿಯಿಂದ ಕಣಕ್ಕೆ ಇಳಿಯಲು ಮುಂದಾಗಿರುವ ಸೆಹ್ವಾಗ್ ಕಾಂಗ್ರೆಸ್ ಪ್ರಬಲ ಸ್ಪರ್ಧಿಯಾದ ದೀಪಿಂದರ್ ಸಿಂಗ್ ಹೂಡಾರ ಎದುರಾಳಿಯಾಗಿ ಕಣಕ್ಕಿಳಿಯಲ್ಲಿದ್ದಾರೆ.. ಈ ಬಾರಿ ಲೋಕಸಭೆಯಲ್ಲಿ ಸೆಹ್ವಾಗ್ ಅವರ ಮೂಲಕ ಈ ಕ್ಷೇತ್ರದಲ್ಲಿ ಗೆಲುವ ಸಾಧಿಸಲು ಬಿಜೆಪಿ ಪ್ಲಾನ್ ರೂಪಿಸುತ್ತಿದೆ..ಈ ಬಗ್ಗೆ ಹರಿಯಾಣದ ಸಂಸದೀಯ ಮಂಡಳಿ ಸಭೆಯಲ್ಲು ಭಾಗವಹಿಸಿದ್ದ ನಾಯಕರೊಬ್ಬರು ಹೇಳಿಕೊಂಡಿದ್ದಾರೆ ಎಂಬ ಮಾಹಿತಿ ಮಾಧ್ಯಮಕ್ಕೆ ಲಭ್ಯವಾಗಿದೆ..
ಇನ್ನು ಈ ಬಗ್ಗೆ ಬಿಜೆಪಿ ಅಧಿಕೃತ ಮಾಹಿತಿ ನೀಡದಿದ್ದರು, ಸೆಹ್ವಾಗ್ ಅವರನ್ನ ಪಕ್ಷಕ್ಕೆ ಸೆಳೆಯುವ ಜವಬ್ದಾರಿಯನ್ನ ಬಿಜೆಪಿಯ ಪ್ರಬಲ ನಾಯಕರಿಗೆ ವಹಿಸಿಕೊಟ್ಟಿದೆ ಎನ್ನಲಾಗ್ತಿದೆ..