ಪಾರ್ಟಿ ಮಾಡೋಕೆ ಫ್ರೆಂಡ್ಸ್ ಎಲ್ಲಾ ಒಟ್ಟಾಗಿ ಹೋಗುತ್ತಾರೆ. ಬಹುತೇಕರಲ್ಲಿ ಕೆಲವರು ಪ್ಯೂರ್ ವೆಜಿಟೇರಿಯನ್ ಗಳಿರ್ತಾರೆ. ಎಲ್ಲರೂ ಚಿಕನ್ ಅದು ಇದು ಅಂತ ನಾನ್ ವೆಜ್ ಆರ್ಡರ್ ಮಾಡಿದಾಗ ವೆಜಿಟೇರಿಯನ್ ಗಳು ಪಾರ್ಟಿಯಲ್ಲಿ ಪ್ರತ್ಯೇಕರಾಗ್ತಾರೆ. ಆದ್ರೆ, ಈಗ ಈ ವೆಜಿಟೇರಿಯನ್ ಗಳಿಗಂತಲೇ ಮಾರುಕಟ್ಟೆಗೆ ಬಂದಿದೆ ವೆಜ್ ಚಿಕನ್.
ಹೌದು ಚಿಕನ್ ಅಂದ್ರೆ ನಿಜವಾದ ಕೊಳೆಯದ್ದಲ್ಲ..! ಬದಲಾಗಿ ನೋಡಲು ಕೋಳಿಯಂತೆ ಚಿಕನ್ ತಿನಿಸಿನ ರೀತಿಯಲ್ಲೇ ಇದು ಇರುತ್ತದೆ.
ಹಾಗೆಂದ ಮಾತ್ರಕ್ಕೆ ಇದು ಚಿಕನ್ ತಿನ್ನೋ ಆಸೆ ಇರೋ ಪ್ಯೂರ್ ವೆಜಿಟೇರಿಯನ್ ಗಳಿಗಾಗಿಯೇ ಇದು ಬಂದಿದೆ ಅಂದರೆ ತಪ್ಪಾಗುತ್ತದೆ. ಇದು ಮಾರುಕಟ್ಟೆಗೆ ಬಂದಿರೋದು ನಾನ್ ವೆಜ್ ಪ್ರಿಯರಿಗಾಗಿಯೇ..!
ಸೋಯಾ ಉತ್ಪನ್ನಗಳಿಗೆ ಪ್ರಸಿದ್ಧವಾಗಿರುವ ದೆಹಲಿಯ ವೆಜ್ ಲೇ ಎಂಬ ಕಂಪನಿ ಇದೀಗ ‘ವೆಜ್ ಚಿಕನ್’ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ನಾನ್ ವೆಜ್ ಆಹಾರವನ್ನು ಬಿಟ್ಟು ಸಸ್ಯಹಾರಿಗಳಾಗ ಬಯಸುವವರಿಗೆ ಇಂತಹ ಆಹಾರ ಪದಾರ್ಥಗಳು ಉತ್ತಮ ಅವಕಾಶವನ್ನು ಕಲ್ಪಿಸಲು ಈ ಉತ್ಪನ್ನವನ್ನು ಪರಿಚಯಿಸಲ್ಪಟ್ಟಿದೆಯಂತೆ.ಬೆಂಗಳೂರಿನ ಕೆಲವು ಹೋಟೆಲ್ ಗಳಲ್ಲೂ ಇವು ಲಭ್ಯ ಇದೆ ಎಂದು ತಿಳಿದು ಬಂದಿದೆ.