No menu items!
7.8 C
Munich
Thursday, April 30, 2026

ನಿಮ್ಮ ರಾಶಿಗೆ ತಕ್ಕಂತೆ‌ ಹನಿಮೂನ್ ಪ್ಲೇಸ್ ಫಿಕ್ಸ್ ಮಾಡಿ…!

Must read

ನಿಮ್ಮ ರಾಶಿಗೆ ತಕ್ಕಂತೆ ನಿಮ್ಮ ಗುಣ.‌ ನಿಮ್ಮ ಗುಣಕ್ಕೆ ತಕ್ಕಂತೆ ಹನಿಮೂನ್ ಪ್ಲೇಸ್…!

ಹೌದು, ನೀವು ನಿಮ್ಮ ರಾಶಿಗೆ ಅನುಗುಣವಾಗಿ ನಿಮ್ಮ ಹನಿಮೂನ್‌ ಪ್ಲೇಸ್ ಸೆಲೆಕ್ಟ್ ಮಾಡಿಕೊಳ್ಳಿ.

ಮೇಷ : ಈ ರಾಶಿಯವರು ಕ್ರಿಯಾತ್ಮಕ ಮತ್ತು ಸಾಹಸಪ್ರಿಯರು. ಇವರಿಗೆ ಸರಿಯಾದ ತಾಣ ಮನಾಲಿ ಮತ್ತು ದುಬೈ ನಂತಹ ಸ್ಥಳಗಳು.

ವೃಷಭ : ಇವರು  ಪ್ಲ್ಯಾನಿಂಗ್‌ ಇಷ್ಟಪಡುವವರು. ಶಾಪಿಂಗ್‌, ಒಳ್ಳೆಯ ಲಂಚ್, ಡಿನ್ನರ್‌ ಇವರಿಗಿಷ್ಟ. ಈ ರಾಶಿಯವರು ನಮ್ಮ ಭಾರತದ ಉದಯ್‌ಪುರ್‌ ಮತ್ತು ವಿದೇಶವಾದಲ್ಲಿ ಇಟಲಿಗೆ ಹನಿಮೂನ್ ಗಾಗಿ ಹೋದರೆ ಚಂದ.

ಮಿಥುನ : ಈ ರಾಶಿಯವರು ಗಾಸಿಪ್‌ ಮತ್ತು ಫನ್‌ ಲವಿಂಗ್ ವ್ಯಕ್ತಿತ್ವದವರು‌. ರೊಮ್ಯಾಂಟಿಕ್‌ ತಾಣಗಳು ಇಷ್ಟವಾಗುತ್ತವೆ‌ . ಊಟಿ ಅಥವಾ ಲಂಡನ್ ಇವರ ಹನಿಮೂನ್ ಗೆ ಸೂಕ್ತ.

ಕರ್ಕಾಟಕ : ಈ ರಾಶಿಯವರು ಬೇರೆ ಬೇರೆ ತಾಣಗಳಿಗಳನ್ನು ಎಂಜಾಯ್ ಮಾಡುತ್ತಾರೆ. ಇವರಿಗೆ ಪ್ರವಾಸ ಇಷ್ಟ. ಈ ರಾಶಿಯವರು ಹನಿಮೂನ್‌ಗೆ ಲಕ್ಷದ್ವೀಪ ಅಥವಾ ಗ್ರೀಸ್‌ ಆಯ್ಕೆ ಮಾಡಿಕೊಳ್ಳಿ.

ಸಿಂಹ : ಗ್ಲಾಮರ್‌, ಲಕ್ಸುರಿ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿದ ನಗರಗಳನ್ನು ಇಷ್ಟಪಡುವ ವ್ಯಕ್ತಿತ್ವ ಈ ರಾಶಿಯವರದ್ದು. ಇವರ ಹನಿಮೂನ್‌ಗೆ ಸರಿಯಾಗಬಹುದಾದ ತಾಣ ರಾಜಸ್ಥಾನ, ಪ್ಯಾರಿಸ್‌.

ಕನ್ಯಾ : ಇವರು ಏನಾದರು ಹೊಸ ಹೊಸ ವಿಷಯಗಳನ್ನು ತಿಳಿಯಲು ಹಾಗೂ ನೋಡಲು ಇಷ್ಟಪಡುತ್ತಾರೆ. ಈ ರಾಶಿಯವರು ಈಜಿಪ್ಟ್‌ ಅಥವಾ ಜೈಸಲ್ಮೇರ್‌ಗೆ ಹನಿಮೂನ್ ಗಂತ ಹೋಗಬಹುದು.

ತುಲಾ : ಸಮಾಜವನ್ನು ತುಂಬಾ ಇಷ್ಟಪಡುವವರು. ಶಾಂತಿ ಪ್ರಿಯರಾದ ಇವರಿಗೆ ಟೂರ್ ಇಷ್ಟ. ಈ ರಾಶಿಯವರಿಗೆ ಸ್ಪೇನ್‌ ಮತ್ತು ಕೇರಳ ಹನಿಮೂನ್‌ ಎಂಜಾಯ್‌ ಮಾಡಲು ಹೇಳಿ ಮಾಡಿಸಿದ ತಾಣ.

ವೃಶ್ಚಿಕ : ಬೇರೆ ಬೇರೆ ತಾಣಗಳ ಬಗ್ಗೆ, ಅಲ್ಲಿನ ಸಂಸ್ಕೃತಿ, ಭಾಷೆಯನ್ನು ಕಲಿಯಲು ಇಷ್ಟಪಡುವ ನೀವು ಜಮ್ಮು ಕಾಶ್ಮೀರ ಅಥವಾ ವೆನಿಸ್‌ ಆಯ್ಕೆ ಮಾಡಿಕೊಳ್ಳಬಹುದು.

 

ಧನು : ಈ ರಾಶಿಯವರಿಗೆ ತಮ್ಮದೇ ಆದ ಟೂರ್ ಮಾಡಲು ಇಷ್ಟವಾಗಿರುವುದರಿಂದ ಇವರು ಪ್ಯಾಕೇಜ್‌ ಟೂರ್‌ ಇಷ್ಟಪಡಲ್ಲ. ಹಾಗಾಗಿ ಇವರು ಹನಿಮೂನ್‌ ಗೆ ಲೋನಾವಾಲ ಅಥವಾ ಪ್ಯಾರೀಸ್‌ ಗೆ ಹೋಗ್ಬಹುದು.

ಮಕರ : ಐತಿಹಾಸಿಕ ಹಿನ್ನೆಲೆ ಇರುವ ತಾಣಗಳಿಗೆ ಭೇಟಿ ನೀಡಲು ಈ ರಾಶಿಯವರಿಗಿಷ್ಟ.ಈ ರಾಶಿಯವರಿಗೆ ಪರ್‌ಫೆಕ್ಟ್‌ ಆದ ತಾಣ ಎಂದರೆ ಕೋವಲಮ್‌ ಅಥವಾ ಪ್ರಾಗ್ಯು

ಕುಂಭ : ಈ ರಾಶಿಯವರಿಗೆ ರಾಜಕೀಯ, ಮಾನವಿಯ ಚಟುವಟಿಕೆಗಳಲ್ಲಿ ತುಂಬಾನೆ ಆಸಕ್ತಿ ಇರುತ್ತದೆ. ಈ ರಾಶಿಯವರಿಗೆ ಗೋವಾ ಟೂರ್‌ ಅಥವಾ ಬೆರ್ಲಿನ್‌ ನಲ್ಲಿ ಹನಿಮೂನ್ ಸೂಪರ್.

ಮೀನ : ಮೀನಾ ರಾಶಿಯವರು ಪ್ರಕೃತಿ ಪ್ರಿಯರು. ಈ ರಾಶಿಯವರಿಗೆ ಸೂಕ್ತವಾದ ತಾಣ ಎಂದರೆ ಭಾರತದಲ್ಲಿ ಪ್ರವಾಸ ಕೈಗೊಳ್ಳುವುದಾದರೆ ಅಂಡಮಾನ್‌ ನಿಕೋಬಾರ್ ಮತ್ತು ಜಪಾನ್.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article