ಅದು ಕ್ಯಾಪ್ಟನ್ ವಿರಾಟ್ ಕೊಹ್ಲಿಯ 24ನೇ ಟೆಸ್ಟ್ ಶತಕ. ನಾಯಕನಾದ ಬಳಿಕ ಬಾರಿಸಿದ 17ನೇ ಶತಕ. 2018ನೇ ವರ್ಷದ 4ನೇ ಶತಕ. ಅತೀ ವೇಗದ ಎರಡನೇ ಟೆಸ್ಟ್ ಶತಕ. ವೆಸ್ಟ್ ಇಂಡಿಸ್ ವಿರುದ್ಧ ಸಿಡಿಸಿದ 2ನೇ ಶತಕ. ವಿರಾಟ್ ಕೊಹ್ಲಿ ಕ್ರಿಕೆಟರ್ ಕೆರಿಯರ್ನ 59ನೇ ಶತಕ. ಹೇಗೆ ವರ್ಣಿಸಿದರೂ ಕಡಿಮೆ ಎನಿಸುತ್ತೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನಲ್ಲಿ 24ನೇ ಶತಕ ಸಿಡಿಸುವ ಮೂಲಕ ಇಂಥಾದ್ದೊಂದು ದಾಖಲೆ ಬರೆದಿದ್ದಾರೆ. ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟಾಸ್ ಗೆದ್ದು ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿದ್ದು ಟೀಂ ಇಂಡಿಯಾ ಪರ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದಾರೆ. ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸಿಡಿಸಿದ 2ನೇ ಶತಕ ಇದಾಗಿದ್ದು ಇನ್ನು ನಾಯಕನಾಗಿ 17ನೇ ಶತಕ ಸಿಡಿಸಿದ ಆಟಗಾರನಾಗಿ ಕೊಹ್ಲಿ ಹೊರಹೊಮ್ಮಿದ್ದಾರೆ.
Date: