ಮಲಯಾಳಂ ಚಿತ್ರವೊಂದರ ಕಣ್ಣು ಹೊಡೆಯುವ ದೃಶ್ಯದ ಮುಖಾಂತರ ರಾತ್ರೋ ರಾತ್ರಿ ಸ್ಟಾರ್ ಆದ ನಟಿ ಪ್ರಿಯಾ ವಾರಿಯರ್. ಈ ದೃಶ್ಯ ಬರುವ ಮುನ್ನ ಪ್ರಿಯಾ ವಾರಿಯರ್ ಎಂಬ ಹುಡುಗಿ ಇದ್ದಾಳೆ ಎಂಬುದು ಯಾರಿಗೂ ಸಹ ತಿಳಿದಿರಲಿಲ್ಲ ಆದರೆ ಈ ದೃಶ್ಯ ವೈರಲ್ ಆಗಿದ್ದೇ ತಡ ಪ್ರಿಯ ವಾರಿಯರ್ ನ್ಯಾಷನಲ್ ರೇಂಜ್ ನಲ್ಲಿ ಎಲ್ಲರಿಗೂ ತಿಳಿಯುವಂತೆ ಆಯಿತು. ಇನ್ನು ಇತ್ತೀಚೆಗಷ್ಟೇ ನವರಸ ನಾಯಕ ಜಗ್ಗೇಶ್ ಅವರನ್ನು ಬೆಂಗಳೂರಿನ ಖಾಸಗಿ ಕಾಲೇಜು ಒಂದರ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಕರೆಸಲಾಗಿತ್ತು ಇದೇ ಕಾರ್ಯಕ್ರಮಕ್ಕೆ ಪ್ರಿಯಾ ವಾರುಯರ್ ಅವರಿಗೂ ಸಹ ಆಮಂತ್ರಣ ನೀಡಲಾಗಿತ್ತು. ಹೀಗಾಗಿ ಪ್ರಿಯಾ ವಾರಿಯರ್ ಅವರ ಜೊತೆ ವೇದಿಕೆಯನ್ನ ಜಗ್ಗೇಶ್ ಅವರು ಹಂಚಿಕೊಂಡಿದ್ದರು.
ಇನ್ನು ಈ ಒಂದು ಕಾರ್ಯಕ್ರಮ ಮುಗಿದ ನಂತರ ಜಗ್ಗೇಶ್ ಅವರು ತಮ್ಮ ಫೇಸ್ ಬುಕ್ ಪೇಜ್ ಮುಖಾಂತರ ಪ್ರಿಯಾ ವಾರಿಯರ್ ಅವರ ಜೊತೆ ವೇದಿಕೆ ಹಂಚಿಕೊಂಡಿದ್ದರ ಬಗ್ಗೆ ಅಸಮಾಧಾನ ಇದೆ ಎಂಬುದನ್ನು ತೋಡಿಕೊಂಡಿದ್ದಾರೆ. ರಾಷ್ಟ್ರಕ್ಕೆ ರಾಜ್ಯಕ್ಕೆ ಆಕೆಯ ಕೊಡುಗೆ ಏನೂ ಇಲ್ಲ, ಬರಹಗಾರ್ತಿಯಲ್ಲ, ಸ್ವಾತಂತ್ರ್ಯ ಹೋರಾಟಗಾರ್ತಿ ಅಲ್ಲ, ನೂರು ಸಿನಿಮಾ ಮಾಡಿದ ನಟಿಯಲ್ಲ, ಆಧುನಿಕ ಮದರ್ ತೆರೆಸಾ ಅಲ್ಲ , ಅನಾಥ ಮಕ್ಕಳಿಗೆ ತಾಯಿ ಅಲ್ಲ , ಸಾಹಿತಿ ಕೂಡ ಅಲ್ಲ ಕೇವಲ ಒಂದು ವಿಡಿಯೋ ಮುಖಾಂತರ ಕಣ್ಣು ಹೊಡೆದು ಯುವಕರಿಗೆ ಪ್ರೀತಿ ತೋರಿಸಿದ ಒಂದು ಹುಡುಗಿ ಜತೆ ವೇದಿಕೆ ಹಂಚಿಕೊಂಡಿದ್ದ ಬಗ್ಗೆ ಜಗ್ಗೇಶ್ ಅವರು ಈ ರೀತಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.