ಐಪಿಎಲ್ 2019ರ ಸೀಸನ್ ನಲ್ಲಿ ಸಾಲು ಸಾಲು ಪಂದ್ಯಗಳನ್ನು ಸೋತು ಸುಣ್ಣವಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೊಹ್ಲಿ ಅವರ ಶತಕದ ನೆರವಿನಿಂದಈ ಪಂದ್ಯದಲ್ಲಿ 2ನೇ ಗೆಲುವು ದಾಖಲಿಸಿತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆರ್‌ಸಿಬಿ ಮೊದಲು 213 ರನ್ ಬಾರಿಸಿತ್ತು. ಈ ಗುರಿಯನ್ನು ಬೆನ್ನತ್ತಿದ ಕೆಕೆಆರ್ 203 ರನ್ ಪೇರಿಸಿ 10 ರನ್‌ಗಳಿಂದ ಶರಣಾಗಿತ್ತು.
ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧ ಕೊಹ್ಲಿ 58 ಎಸೆತಗಳಿಗೆ 9 ಬೌಂಡರಿ, 4 ಸಿಕ್ಸ್ ಸೇರಿ 100 ರನ್ ಬಾರಿಸಿದರು. ಇದು ಐಪಿಎಲ್ ನಲ್ಲಿ ಕೊಹ್ಲಿ ದಾಖಲಿಸಿದ ಐದನೇ ಶತಕ.
ಕೊಹ್ಲಿ ಒನ್ನೊಂದು ಶತಕ ಬಾರಿಸಿದರೂ ಐಪಿಎಲ್ ನಲ್ಲಿ ಅಧಿಕ ಶತಕದ ದಾಖಲೆ ಹೊಂದಿರುವ ಕ್ರಿಸ್ ಗೇಲ್ ದಾಖಲೆ ಸರಿಸಮಗೊಳ್ಳಲಿದೆ.