ಶನಿದೇವನ ಕೃಪೆಗೆ ಪಾತ್ರರಾಗಲು ಹೀಗೆ ಮಾಡಿ‌…

0
256

ಈ ಕಾಲದಲ್ಲೂ ಜನ ಗ್ರಹವೊಂದಕ್ಕೆ ಹೆದರುತ್ತಾರೆ ಅಂದರೆ ಅದು ಶನಿದೇವನಿಗೆ ಮಾತ್ರ. ‌ಹೌದು, ಸೂರ್ಯ ಪುತ್ರ ಶನೇಶ್ವರರು ಸ್ಮರಣೆಗೆ ಬರುತ್ತಲೇ ಮನಸ್ಸು ಭಯಭೀತಗೊಳ್ಳುತ್ತದೆ. ಆದರೆ, ನಿಧಾನಗತಿಯಲ್ಲಿ ಸಾಗುವ ಶನಿದೇವ ಅತ್ಯಂತ ದಾರ್ಶನಿಕ ಹಾಗೂ ಆಧ್ಯಾತ್ಮಿಕ ಪ್ರವುತ್ತಿಯ ದೇವನಾಗಿದ್ದಾನೆ. ಶನಿದೇವ ವ್ಯಕ್ತಿಗಳನ್ನು ಅಗ್ನಿಪರೀಕ್ಷೆಗೆ ಒಳಪಡಿಸಿ ಶುದ್ಧ ಚಿನ್ನದ ಹಾಗೆ ಹೊಳೆಯುವಂತೆ ಮಾಡುತ್ತಾನೆ.

ಕುಂಡಲಿಯಲ್ಲಿ ಶನಿದೇವ ಶುಭ ಸ್ಥಾನದಲ್ಲಿದ್ದರೆ ಆ ವ್ಯಕ್ತಿ ಅಪಾರ ಸಂಪತ್ತು ಹಾಗೂ ಮಾನ-ಸನ್ಮಾನಕ್ಕೆ ಪಾತ್ರನಾಗುತ್ತಾನೆ. ಒಂದು ವೇಳೆ ಶನಿ ಅಶುಭ ಸ್ಥಾನದಲ್ಲಿದ್ದರೆ, ವ್ಯಕ್ತಿಗೆ ಭಾರಿ ನಷ್ಟ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾದರೆ ಶನಿದೇವನನ್ನು ಒಲಿಸುವ ಬಗೆ ಹೇಗೆ. ಯಾವ ವಿಧಾನದಿಂದ ಕರ್ಮಫಲದಾತನು ಒಲಿಯುವನು ಎಂಬುದನ್ನು ತಿಳಿಯೋಣ.

ಶನಿ ಮಹಾತ್ಮನ ಅನುಗ್ರಹಕ್ಕೆ ಪಾತ್ರರಾಗಲು ಮೊದಲು ನೀವು ನಿಮ್ಮ ಹೆತ್ತವರನ್ನು ಗೌರವಿಸಬೇಕು. ಅವರ ಸೇವೆ ಮಾಡಬೇಕು. ಇದರಿಂದ ಶನೇಶ್ವರನೂ‌‌ ಸಂತೃಪ್ತನಾಗುತ್ತಾನೆ.

ಒಂದು ವೇಳೆ ನಿಮ್ಮ ಜೀವನದಲ್ಲಿ ಶನಿಯ ಸಾಡೆಸಾತಿ ನಡೆಯುತ್ತಿದ್ದು ಮತ್ತು ಶನಿ ನೀಡುತ್ತಿರುವ ತೊಂದರೆಗಳಿಂದ ನೀವು ಚಿಂತಿತರಾಗಿದ್ದಾರೆ ನೀಲಮಣಿ ಅಥವಾ ನೀಲಿ ರತ್ನವನ್ನು ಧರಿಸಬೇಕು.
ಇದನ್ನು ಧರಿಸಲು ಆಗದಿದ್ದಲಿ, ಶಮಿ ವೃಕ್ಷದ ಬೇರುಗಳನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಬೇಕು‌ ಮತ್ತು ಅದನ್ನು ಭುಜಕ್ಕೆ ಕಟ್ಟಿಕೊಳ್ಳಬಹುದು.

ಇನ್ನೂ, ಶನಿದೋಷದಿಂದ ಮುಕ್ತರಾಗಲು ನಿತ್ಯವೂ ಸಹ ಓಂ ಪ್ರಾಂ ಪ್ರಿಂ ಪ್ರೌಂ ಸಃ ಶನಿಶ್ವರಾಯ್ ನಮಃ ಮಂತ್ರವನ್ನು ಪಠಿಸಬೇಕು. ಇದರಿಂದ ಶನಿದೋಣ ನಿವಾರಣೆಯಾಗುತ್ತದೆ.

ಈ ವಸ್ತುಗಳಿಗೆ ಹೆಚ್ಚಿನ ಮಹತ್ವವಿದ್ದು, ಇವುಗಳ ದಾನಮಾಡುವುದರಿಂದ ಶನಿಯ ಕೃಪೆ ದೊರೆಯುವುದು. ಶನಿಯ ಕೃಪೆಗೆ ಪಾತ್ರರಾಗಲು ಲೋಹ, ಕಪ್ಪು ಎಳ್ಳು, ಉದ್ದಿನಬೆಳೆ, ಕಸ್ತೂರಿ, ಕಪ್ಪು ವಸ್ತ್ರ, ಕಪ್ಪು ಪಾದರಕ್ಷೆಗಳು, ಚಹಾಪುಡಿ ಇತ್ಯಾದಿಗಳ ದಾನ ಮಾಡಬೇಕು.

ಪ್ರತಿ‌ ಶನಿವಾರದಂದು ಆಲದ ಮರಕ್ಕೆ ಏಳುಬಾರಿ ಪ್ರದಕ್ಷಿಣೆಯನ್ನು ಹಾಕಿ ಕಚ್ಚಾ ಸೂತ್ರ ಸುತ್ತಬೇಕು.
ಈ ವೇಳೆ ಶನಿ ಮಂತ್ರ ಪಠಿಸಿ. ಬಳಿಕ ದೀಪದಾನ ಮಾಡಿ. ಉಪ್ಪು-ಮಸಾಲೆ ರಹಿತ ಒಪ್ಪತ್ತು ಊಟ ಮಾಡಿದರೆ ಒಳಿತು.

ನಾಯಿಗೆ ಎಣ್ಣೆ ಹಚ್ಚಿದ ರೊಟ್ಟಿ ಹಾಗೂ ಸಿಹಿ ತಿನಿಸಿ‌ ಹಾಕಿ. ಒಂದು ವೇಳೆ ಇದು ಸಾಧ್ಯವಾಗದೆ ಹೋದಲ್ಲಿ ಕಪ್ಪು ನಾಯಿಗೆ ಬಿಸ್ಕಿಟ್ ತಿನ್ನಿಸಿ. ಕಪ್ಪು ಹಸುವಿನ ಸೇವೆ ಮಾಡಿದರೂ ಕೂಡ ಶನಿದೇವ ಸಂತೃಪ್ತನಾಗುತ್ತಾನೆ.

ಶನಿಗೆ ಸಂಬಂಧಿಸಿದ ದೋಷ ನಿವಾರಣೆಯಾಗಬೇಕಾದರೆ ಆಂಜನೇಯ ಸ್ವಾಮಿಯ ಆರಾಧನೆ ಮಾಡಿ. ಸಾಡೆಸಾತಿ ನಡೆಯುತ್ತಿದ್ದರೆ ಪ್ರತಿ ಮಂಗಳವಾರ ಹಾಗೂ ಶನಿವಾರ ಸುಂದರಕಾಂಡ ಪಠಿಸಿ, ಹನುಮನಿಗೆ ಕೇಸರಿ ಬಣ್ಣದ ವಸ್ತ್ರ ಅರ್ಪಿಸಬೇಕು.

ಇನ್ನೂ ಶ್ರಾವಣ ಮಾಸದ ಶನಿವಾರದಂದು ಶನಿಯ ಪೂಜಿಸಿದರೆ ತುಂಬಾ ಶ್ರೇಷ್ಠ. ಸೂರ್ಯೋದಯಕ್ಕೂ ಮುನ್ನ ಶನಿದೇವರ ದೇವಸ್ಥಾನಕ್ಕೆ ಪೂಜಿಸುವುದರಿಂದಲೂ‌ ಸತ್ಫಲ ಪ್ರಾಪ್ತಿಯಾಗುವುದು. ಶನಿದೇವನ ದೇವಸ್ಥಾನಕ್ಕೆ ಹೋಗಿ ಬಂದ ಬಳಿಕ ಆಂಜನೇಯ ಸ್ವಾಮಿಯ ದೇಗುಲಕ್ಕೂ ಹೋಗಿ ಬಂದರೆ ಒಳಿತಾಗುವುದು.

LEAVE A REPLY

Please enter your comment!
Please enter your name here