ಶಬರಿಮಲೆ ಪ್ರವೇಶ ವಿರೋಧಿಸಿ ಮಸೀದಿ ಪ್ರವೇಶಕ್ಕೆ ಮುಂದಾದ 6 ಮಹಿಳೆಯರು..
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಈ ಹಿಂದೆ ಇಬ್ಬರು ಮಹಿಳೆಯರು ಪ್ರವೇಶ ಮಾಡಿ ವಿಚಾರ ಸುದ್ದಿಯಾಗಿತ್ತು.. ಇದಾದ ಬಳಿಕ ಇಡೀ ಕೇರಳದಲ್ಲಿ ತೀರ್ವ ವಿರೋಧ ವ್ಯಕ್ತವಾಗಿ ಪ್ರತಿಭಟನೆ ಸಹ ನಡೆಯಿತು.. ಇನ್ನು ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಪ್ರತಿಯಾಗಿ ಇಂದು 6 ಜನ ಮಹಿಳೆಯರು ಮಸೀದಿ ಪ್ರವೇಶಕ್ಕೆ ಮುಂದಾದ ಘಟನೆ ಶಬರಿಮಲೆ ಸಮೀಪವೆ ನಡೆದಿದೆ..
ಹೌದು, ಶಬರಿಮಲೆ ಸಮೀಪ ಇರುವ ಎರುಮೇರಿಯಲ್ಲಿನ ವಾವರ್ ಮಸೀದಿಗೆ ಇಂದು ‘ಹಿಂದು ಮಕ್ಕಳ್ ಕಚ್ಚಿ’ ಸಂಸ್ಥೆಯ ಸದಸ್ಯರಾಗಿದ್ದ ಈ 6 ಮಹಿಳೆಯರು ಯತ್ನ ಮಾಡಿದ್ದಾರೆ.. ಇವರನ್ನ ತಡೆದ ಪೊಲೀಸರು ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಹುಟ್ಟಿಸಲು ಯತ್ನಿಸಿದ ಆರೋಪದ ಮೇಲೆ ವಶಕ್ಕೆ ಪಡೆದಿದ್ದಾರೆ..
ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಈ ಹಿಂದೆ ಮಹಿಳೆಯರು ಪ್ರವೇಶಿಸಿದ್ದಕ್ಕೆ ಮಸೀದಿಗೂ ಮಹಿಳೆಯರು ಪ್ರವೇಶ ಮಾಡಬೇಕು ಹೀಗಾಗೆ ನಮಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿ ಮಸೀದಿ ಪ್ರವೇಶಕ್ಕೆ ಮುಂದಾಗಿದ್ದರು ಎನ್ನಲಾಗಿದೆ..