ಸರ್ಕಾರ ಮೀಸಲಾತಿ ನೀಡುವವರೆಗೂ ನಾನು ಬಿಡಲ್ಲ. ಸ್ವಾಮೀಜಿ ಒಪ್ಪಿದರೆ ಈಗಲೇ ಈ ವೇದಿಕೆಯಲ್ಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ.
ನಾವು ಬೀದಿಗೆ ಬಂದ್ರೆ ಯಾರ ಮಾತೂ ಕೇಳಲ್ಲ. ವಾಲ್ಮೀಕಿ ಸಮುದಾಯದ ಸ್ವಾಮೀಜಿಗಳು ಕೊಟ್ಟ ಭಿಕ್ಷೆಯಿಂದ ಇಂದು ನಾವು ರಾಜಕಾರಣದಲ್ಲಿದ್ದೇವೆ. ನಾವು ಈ ಸ್ಥಾನದಲ್ಲಿರಲು ಸ್ವಾಮೀಜಿಗಳು ಕಾರಣರಾಗಿದ್ದಾರೆ. ಸ್ವಾಮೀಜಿಗಳ ಆಶೀರ್ವಾದದಿಂದ ನಾವು ಇಂದು ಇಲ್ಲಿದ್ದೇವೆ. ಜೀವನದಲ್ಲಿ ಯಾವುದೂ ಶಾಶ್ವತವಲ್ಲ.
ಸಮಾಜಕ್ಕಾಗಿ ಕೆಲಸ ಮಾಡಬೇಕು. ನಾವು ನಾಳೆ ಬದುಕುವ ಯಾವ ಗ್ಯಾರಂಟಿಯೂ ಇಲ್ಲ. ಬದುಕುವವರೆಗೆ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡೋಣ ಎಂದರು.