ಶಿಕ್ಷಕಿಯ ದೌರ್ಜನ್ಯ: ಕ್ಷುಲ್ಲಕ ಕಾರಣಕ್ಕೆ ಮಗುವಿನ ಹಲ್ಲು ಮುರಿದ ಟೀಚರ್!
ಬೆಂಗಳೂರು:- ಮಕ್ಕಳು ತಪ್ಪು ಮಾಡಿದ್ರೆ ಶಿಕ್ಷರಾದವರು ಬುದ್ದಿ ಹೇಳಬೇಕು. ಅದನ್ನಬಿಟ್ಟು ಏನು ಹರಿಯದ ಕಂದಮ್ಮಗೆ ಮನಬಂದಂತೆ ಥಳಿಸಿದ್ರೆ ಹೇಗೆ. ಆ ಕಂದನಿಗೆ ತಪ್ಪು ಸರಿ ಗೊತ್ತಾಗತ್ತ ಹೇಳಿ. ಬುದ್ದಿ ಹೇಳಬೇಕಾದವರೆ ತಪ್ಪು ಮಾಡಿದ್ರೆ ಯಾರಿಗೆ ನಾವು ಬುದ್ದಿ ಹೇಳೋಣ. ಅಷ್ಟಕ್ಕೂ ಈ ಮಗುವಿನ ಕಿರುಚಾಟ, ನೋವು ಯಾರ ಬಳಿ ಹೇಳಿಕೊಳ್ಳುತ್ತೆ.
ಎಸ್, ಜಯನಗರದ ಹೋಲಿ ಕ್ರಿಸ್ಟ್ ಶಾಲೆಯಲ್ಲಿ ನೀರಿನಲ್ಲಿ ಆಟವಾಡಿದ್ದಕ್ಕೆ ಶಿಕ್ಷಕಿ ವಿದ್ಯಾರ್ಥಿಯ ಹಲ್ಲು ಮುರಿಯುವ ಹಾಗೆ ಹೊಡೆದ ಘಟನೆ ಜರುಗಿದೆ.
ಅಶ್ವಿನ್ ಎಂಬ ವಿದ್ಯಾರ್ಥಿ ಗುರುವಾರ ಮಧ್ಯಾಹ್ನ ಊಟದ ಸಮಯದಲ್ಲಿ ನೀರಿನಲ್ಲಿ ಆಟವಾಡುತ್ತಿದ್ದನು. ಇದರಿಂದ ಕೋಪಗೊಂಡ ಹಿಂದಿ ವಿಷಯ ಶಿಕ್ಷಕಿ ಅಜ್ಮತ್ ವಿದ್ಯಾರ್ಥಿ ಅಶ್ವಿನ್ ಮುಖಕ್ಕೆ ಕಟ್ಟಿಗೆಯಿಂದ ಹೊಡೆದಿದ್ದಾರೆ. ಇದರಿಂದ ವಿದ್ಯಾರ್ಥಿ ಅಶ್ವಿನ್ನ ಹಲ್ಲು ಮುರಿದಿದೆ.
ವಿದ್ಯಾರ್ಥಿ ಅಶ್ವಿನ್ನನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಕ್ಷಕಿ ಅಜ್ಮತ್ ವಿರುದ್ಧ ವಿದ್ಯಾರ್ಥಿ ಅಶ್ವಿನ್ ತಂದೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಿಕ್ಷಕಿ ಅಜ್ಮತ್ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಶಿಕ್ಷಕಿ ಅಜ್ಮತ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ.