ಕನ್ನಡ ಚಿತ್ರರಂಗದಲ್ಲಿ ಕೆಲ ಚಿತ್ರಗಳು ಬಹಳ ಅದ್ದೂರಿಯಾಗಿ ಸೆಟ್ಟೇರಿ ನಂತರ ಚಿತ್ರೀಕರಣ ಶುರುವಾಗದೆ ನಿಂತು ಹೋಗಿವೆ. ಆ ಚಿತ್ರಗಳ ಪೈಕಿ ಸ್ಟಾರ್ ನಟರ ಚಿತ್ರಗಳು ಸಹ ಇವೆ. ಗಾಂಧಿನಗರದಲ್ಲಿ ಈ ಸ್ಟಾರ್ ಅಭಿನಯದ ಚಿತ್ರ ಬರಲಿದೆ ಎಂಬ ಮಾತುಗಳು ಕೇಳಿ ಬಂದರೂ ಸಹ ತದನಂತರ ಆ ಮಾತು ನಿಜವಾಗದೇ ಗಾಳಿ ಸುದ್ದಿಯಾಗಿ ಮುಚ್ಚಿ ಹೋಗಿವೆ. ಇನ್ನು ಈ ಹಿಂದೆ ಶಿವಣ್ಣ ಮತ್ತು ವಿಷ್ಣುವರ್ಧನ್ ಒಟ್ಟಿಗೆ ಅಭಿನಯಿಸಬೇಕಿದ್ದ ಚಿತ್ರವೊಂದು ಶುರುವಾಗುವ ಹಂತ ತಲುಪಿ ತದನಂತರ ಚಿತ್ರೀಕರಣ ಆರಂಭವಾಗಿದೆ ನಿಂತು ಹೋಗಿತ್ತು.
ಹೌದು ಚಿ. ದತ್ತರಾಜ್ ನಿರ್ದೇಶನದಲ್ಲಿ ಶಿವಣ್ಣ ಮತ್ತು ವಿಷ್ಣುವರ್ಧನ್ ಅವರು ಅಭಿನಯಿಸ ಬೇಕಿದ್ದ ಚಿತ್ರದ ಹೆಸರು ಕೃಷ್ಣಾರ್ಜುನ. ಶಿವಣ್ಣ ಮತ್ತು ವಿಷ್ಣುವರ್ಧನ್ ಅವರು ಕೊಟ್ಟಿಗೆ ಅಭಿನಯಿಸಲಿದ್ದಾರೆ ಎಂಬ ಪೇಪರ್ ಜಾಹೀರಾತನ್ನು ಸಹ ಚಿತ್ರತಂಡ ನೀಡಿದ್ದು ಇನ್ನು ಈ ಇಬ್ಬರು ನಟರು ಸಹ ಅತಿ ಎತ್ತರದ ಗೆಲುವಿನ ಮಟ್ಟದಲ್ಲಿದ್ದರೂ ಸಹ ಈ ಚಿತ್ರ ಸೆಟ್ಟೇರದೇ ಇದ್ದದ್ದು ಇಂದಿಗೂ ಹಲವಾರು ಪ್ರೇಕ್ಷಕರಲ್ಲಿ ಪ್ರಶ್ನೆಯಾಗಿಯೇ ಉಳಿದಿದೆ.