ಶಿವಸೇನೆಯ ಮುಖವಾಣಿ ಸಾಮ್ನಾದ ತಮ್ಮ ಅಂಕಣದಲ್ಲಿ ಪಕ್ಷದ ಸಂಸದ ಮತ್ತು ಕಾರ್ಯಕಾರಿ ಸಂಪಾದಕರಾಗಿರುವ ಸಂಜಯ್ ರಾವತ್ ಅವರು, ದೇಶದಲ್ಲಿ ಪ್ರಜಾಪ್ರಭುತ್ವವನ್ನು ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಮತ್ತು ಕಾಂಗ್ರೆಸ್ ಪಕ್ಷ ಎತ್ತಿಹಿಡಿದಿರುವುದು ಶ್ಲಾಘನೀಯ ಎಂದು ಬಣ್ಣಿಸಿದ್ದಾರೆ.
ಸಂಸತ್ತಿನ ಶಿಷ್ಠಾಚಾರಗಳನ್ನು ಗಾಳಿಗೆ ತೂರಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸಿದರೆ ಪ್ರಜಾಪ್ರಭುತ್ವದ ವ್ಯವಸ್ಥೆಯು ಕುಸಿಯುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಇದೇ ವೇಳೆ, ಪ್ರಸ್ತುತ ದೇಶದಲ್ಲಿ ಇರುವ ಪ್ರತಿಪಕ್ಷದ ಬಲಹೀನತೆಯನ್ನೂ ಉಲ್ಲೇಖಿಸಿದ್ದಾರೆ.