ಪಂಜಾಬ್ ಪ್ರಾಂತ್ಯದಲ್ಲಿ ಭಯೋತ್ಪಾದನೆಗೆ ಪೋಷಣೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಉಗ್ರ ಹಫೀಜ್ ಹಾಗೂ 12 ಸದಸ್ಯರ ವಿರುದ್ಧ 23 ಪ್ರಕರಣಗಳು ದಾಖಲಾಗಿದೆ. ಶೀಘ್ರವೇ ಉಗ್ರ ನಿಗ್ರಹ ಇಲಾಖೆ ಆರೋಪಿಗಳನ್ನು ಬಂಧಿಸಲಿದೆ ಎಂದು ಪಂಜಾಬ್ ಪ್ರಾಂತ್ಯದ ಪಾಕಿಸ್ತಾನ ಪೊಲೀಸ್ ಇಲಾಖೆ ವಕ್ತಾರ ನಿಯಬ್ ಹೈದರ್ ನಖ್ವಿ ಹೇಳಿದ್ದಾರೆ.
ಹಫೀಜ್ ಬಂಧನಕ್ಕೆ ಇಮ್ರಾನ್ ಖಾನ್ ಸರ್ಕಾರ ಇನ್ನೂ ಸಮ್ಮತಿ ನೀಡಿಲ್ಲ. ಜಾಗತಿಕ ಒತ್ತಡಕ್ಕೆ ಮಣಿದು ಉಗ್ರ ಹಫೀಜ್ ನನ್ನು ಬಂಧಿಸಿದರೆ, ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಗಳು ಹಫೀಜ್ ನನ್ನು ವಿಚಾರಣೆಗೊಳಪಡಿಸಬಹುದು ಎನ್ನಲಾಗಿದೆ.