ಶುಂಠಿಯ ಸಿಪ್ಪೆ ತೆಗೆಯುವ ಸುಲಭ ವಿಧಾನ: ಈ ಟಿಪ್ಸ್ ನಿಮಗಾಗಿ ಜನರೇ!

Date:

ಶುಂಠಿಯ ಸಿಪ್ಪೆ ತೆಗೆಯುವ ಸುಲಭ ವಿಧಾನ: ಈ ಟಿಪ್ಸ್ ನಿಮಗಾಗಿ ಜನರೇ!

ಬೇಗ ಅಡುಗೆ ಮಾಡಬೇಕೆಂದಾಗ ಅಗತ್ಯವಾದ ಶುಂಠಿ ಸಿಪ್ಪೆ ತೆಗೆಯುವುದು ಬಹಳ ಕಷ್ಟದ ಕೆಲಸ. ಇದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ. ಕೆಲ ಸುಲಭ ವಿಧಾನ ಅನುಸರಿಸಿದರೆ ಸಿಪ್ಪೆಯನ್ನು ಸುಲಭವಾಗಿ ತೆಗೆಯಬಹುದು. ಎಳೆ ಶುಂಠಿ ಸಿಪ್ಪೆ ತೆಳು ಇದ್ದರೆ ಬಲಿತ ಶುಂಠಿಯ ಸಿಪ್ಪೆ ದಪ್ಪ ಇರುತ್ತದೆ. ಎಳೆ ಶುಂಠಿಯ ಸಿಪ್ಪೆಯನ್ನು ನಾವು ಕೈ ಬೆರಳು ಸಹಾಯದಿಂದಲೇ ಸುಲಿಯ ಬಹುದು. ಆದರೆ ಬಲಿತ ಶುಂಠಿ ಸಿಪ್ಪೆ ತೆಗೆಯುವುದು ತುಸು ಕಷ್ಟ.

ಶುಂಠಿಯ ಸಿಪ್ಪೆ ತೆಗೆಯುವ ಕೆಲಸ ಹಲವರಿಗೆ ತಲೆನೋವು. ಎಲ್ಲಾ ವಿಧದ ಅಡುಗೆಗೂ ಶುಂಠಿ ಇರಲೇಬೇಕು. ಕೆಲವರಂತೂ ಶುಂಠಿ ಟೀಯನ್ನು ಇಷ್ಟ ಪಟ್ಟು ಸೇವಿಸುತ್ತಾರೆ. ಆದರೆ ಅಡುಗೆಗೆ ಬಳಸುವ ಮುನ್ನ ಇದರ ಸಿಪ್ಪೆ ಸುಲಿದು ಬಳಸುವುದು ಉತ್ತಮ. ಈ ಸಿಪ್ಪೆಯೂ ಅಂಟಿಕೊಂಡಿರುವುದರಿಂದ ಇದನ್ನು ಸುಲಿಯುವುದು ತುಂಬಾ ಕಿರಿಕಿರಿ ಉಂಟುಮಾಡುವ ಕೆಲಸವಾಗಿದೆ. ಎಳೆ ಶುಂಠಿಯ ಸಿಪ್ಪೆಯನ್ನು ಕೈ ಬೆರಳು ಸಹಾಯದಿಂದಲೇ ಸುಲಿಯ ಬಹುದು

ಸಿಪ್ಪೆ ತೆಗೆಯಲು ಇಲ್ಲಿದೆ ಕೆಲವು ಟಿಪ್ಸ್.

ಶುಂಠಿ ಮಣ್ಣಿನೊಳೆಗೆ ಬೆಳೆಯುವುದರಿಂದ, ಶುಂಠಿಯನ್ನು ಚೆನ್ನಾಗಿ ತೊಳೆದುಕೊಳ್ಳಿ. ಸ್ವಲ್ಪ ಸಮಯದವರೆಗೆ ಅದನ್ನು ನೀರಿನಲ್ಲಿ ನೆನೆ ಹಾಕಿದರೆ ಸುಲಭವಾಗಿ ಸಿಪ್ಪೆ ತೆಗೆಯಬಹುದು.

ಚಾಕುವಿನಲ್ಲಿ ಸಿಪ್ಪೆ ತೆಗೆದರೆ ಶುಂಠಿಯ ಅರ್ಧ ಭಾಗವೇ ಸಿಪ್ಪೆಯೊಂದಿಗೆ ಹೋಗುತ್ತವೆ. ಹೀಗಾಗಿ ಇದರ ಸಿಪ್ಪೆ ತೆಗೆಯಲು ಸ್ಪೂನ್‌ ಬಳಸುವುದು ಉತ್ತಮ ಮಾರ್ಗವಾಗಿದೆ. ಚಮಚದ ಮುಂಭಾಗವನ್ನು ಬಳಸಿ ಶುಂಠಿಯ ಸಿಪ್ಪೆಯನ್ನು ತೆಗೆಯಿರಿ.

ಶುಂಠಿಯನ್ನು ಸ್ವಲ್ಪ ಸಮಯದವರೆಗೆ ಬಿಸಿ ನೀರಿನಲ್ಲಿ ನೆನೆಸಿಡಬೇಕು. ಆ ಬಳಿಕ ಶುಂಠಿ ಸಿಪ್ಪೆಯಲ್ಲಿ ಕೈಯಿಂದಲೇ ತೆಗೆಯಬಹುದು.

ಅಡುಗೆಗೆ ಮುನ್ನ ಅರ್ಧ ಗಂಟೆಗಳ ಕಾಲ ಶುಂಠಿಯನ್ನು ಫ್ರಿಡ್ಜ್‌ನಲ್ಲಿ ಇಡಬೇಕು. ಆಗ ಸಿಪ್ಪೆ ಮೃದುವಾಗುತ್ತದೆ, ಚಾಕು ಸಹಾಯದಿಂದ ಸುಲಭವಾಗಿ ತೆಗೆಯಬಹುದು.

ಶುಂಠಿ ಕತ್ತರಿಸುವ ಸಾಧನಗಳು ಮಾರುಕಟ್ಟೆಯಲ್ಲಿ ಸಿಗುತ್ತದೆ. ಇದನ್ನು ಬಳಸಿಕೊಂಡು ಶುಂಠಿಯ ಮೇಲ್ಪದರ ತೆಗೆಯುವುದು ಕಷ್ಟವೇನಲ್ಲ

Share post:

Subscribe

spot_imgspot_img

Popular

More like this
Related

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರು:...

ಅಪ್ಪಿ-ತಪ್ಪಿಯೂ ದೇವರಿಗೆ ಪೂಜೆಯಲ್ಲಿ ಈ ತಪ್ಪು ಮಾಡ್ಬೇಡಿ: ಏನಾಗುತ್ತೆ ಗೊತ್ತಾ?

ಅಪ್ಪಿ-ತಪ್ಪಿಯೂ ದೇವರಿಗೆ ಪೂಜೆಯಲ್ಲಿ ಈ ತಪ್ಪು ಮಾಡ್ಬೇಡಿ: ಏನಾಗುತ್ತೆ ಗೊತ್ತಾ? ಹಿಂದೂ ಧರ್ಮದಲ್ಲಿ...