ಇಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶೃಂಗೇರಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು. ಇಂದು ಬೆಳಗ್ಗೆ ಶೃಂಗೇರಿ ದೇವಾಲಯಕ್ಕೆ ಆಗಮಿಸಿದ ಅವರು, ದೇವಿ ಶಾರದಾಂಬೆಗೆ ಪೂಜೆ ಸಲ್ಲಿಸಿದರು. ನಂತರ ಜಗದ್ಗುರುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ದೇವಿಯ ದರ್ಶನಕ್ಕೆ ಆಗಮಿಸಿರುವ ಕುಮಾರಸ್ವಾಮಿ ಅವರು ಕೊಪ್ಪ ಸಮೀಪದ ಗುಡ್ಡೆತೊಟದಲ್ಲಿ ವಾಸ್ತವ್ಯ ಹೂಡಿದ್ದು, ಇಂದು ದೇಗುಲ ಹಾಗೂ ಸ್ವಾಮೀಜಿಗಳ ಭೇಟಿ ಮಾಡಿದರು.