ಶ್ರೀಮುರಳಿ ಕೈ ಸೇರಿರುವ ಈ ಫೋಟೋ ನಟ ದರ್ಶನ್ ಕ್ಲಿಕ್ ಮಾಡಿದ್ದು. ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ದರ್ಶನ್ ಕಾಡಿನಲ್ಲಿ ಪ್ರಾಣಿಗಳ ಫೋಟೋಗಳನ್ನು ತೆಗೆದಿದ್ದರು.
ನಂತರ ಈ ಫೋಟೋಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಒಳ್ಳೆಯ ಕೆಲಸಕ್ಕೆ ಬಳಸುವ ಪ್ಲಾನ್ ಆಗಿತ್ತು.
ಇದೀಗ ದರ್ಶನ್ ಕ್ಲಿಕ್ ಮಾಡಿದ ಹುಲಿಯ ಫೋಟೋವನ್ನು ನಿರ್ಮಾಪಕ ಉಮಾಪತಿ ತಮ್ಮ ನಾಯಕ ಶ್ರೀಮುರಳಿಗೆ ಪ್ರೀತಿಯಿಂದ ನೀಡಿದ್ದಾರೆ. ಈ ಫೋಟೋಗೆ 10 ಸಾವಿರ ರೂಪಾಯಿಯಾಗಿದೆ. ದರ್ಶನ್ ಕ್ಲಿಕ್ ಮಾಡಿದ ಈ ಫೋಟೋ ಮುರಳಿ ಅವರಿಗೂ ಬಹಳ ಇಷ್ಟವಾಗಿದೆ.
ಈ ಹಿಂದೆ ‘ಹೆಬ್ಬುಲಿ’ ಸಿನಿಮಾ ನಿರ್ಮಾಣ ಮಾಡಿದ್ದ ಉಮಾಪತಿ ಈಗ ಹುಲಿಯ ಫೋಟೋವನ್ನೇ ಉಡುಗೊರೆಯಾಗಿ ನೀಡಿದ್ದಾರೆ.