ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದ ರೆಂದರೆ ಅದು ನಿಜವಾಗುತ್ತದೆ ಎಂದು ನಂಬಿರುವ ಅವರ ಭಕ್ತರು ಇದೀಗ ಶ್ರೀಗಳು ಮತ್ತೊಂದು ಭವಿಷ್ಯ ನಡೆಸಿದ್ದಾರೆ ರಾಜ್ಯದ ಬಿಜೆಪಿ ಸರ್ಕಾರ ಪತನವಾಗಲಿದೆ ಎಂಬ ಭವಿಷ್ಯ ನುಡಿದಿದ್ದರು. ಇದೀಗ ಈ ಕುರಿತು ಬಿಜೆಪಿ ನಾಯಕರೊಬ್ಬರು ಶ್ರೀಗಳಿಗೆ ಸವಾಲು ಎಸೆದಿದ್ದಾರೆ.
ಮಂಡ್ಯ ತಾಲೂಕಿನ ಉಪ್ಪಾರಕನಹಳ್ಳಿ ಬಿಜೆಪಿ ಕಾರ್ಯಕರ್ತ ಶಿವಕುಮಾರ್, ಕೋಡಿಮಠದ ಶ್ರೀಗಳು ಹೇಳಿದಂತೆ ಸರ್ಕಾರ ಪತನವಾದರೆ ನನ್ನ ಹೆಬ್ಬೆರಳು ಕತ್ತರಿಸಿ ಅವರ ಪಾದಕ್ಕೆ ಅರ್ಪಿಸುತ್ತೇನೆ ಎಂದು ಘೋಷಿಸಿದ್ದಾರೆ.
ಆದರೆ ಸರ್ಕಾರ ಪತನವಾಗಲಿದೆ ಎಂಬ ಅವರ ಭವಿಷ್ಯ ನೋವುಂಟು ಮಾಡಿದ್ದು, ಇದು ನಿಜವಾಗದಿದ್ದರೆ ಶ್ರೀಗಳು ನನ್ನನ್ನು ತಮ್ಮ ಮಠದ ಶಿಷ್ಯನನ್ನಾಗಿ ಸ್ವೀಕರಿಸಬೇಕೆಂದು ಶಿವಕುಮಾರ್ ಹೇಳಿದ್ದಾರೆ.