ಉಪ ಚುನಾವಣೆ ಮುಗಿದ ಬಳಿಕ ರಾಜ್ಯದಲ್ಲಿ ಮಂತ್ರಿ ಸ್ಥಾನಕ್ಕಾಗಿ ಹೊಡೆದಾಟಗಳು ನೀಡಿದೆ ಎಂದು ಹೇಳಲಾಗುತ್ತಿದೆ ಆದರೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಶ್ರೀರಾಮುಲು ಅವರು ಲಗ್ಗೆ ಇಟ್ಟಿದ್ದಾರೆ ಎರಡೂ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಠಿಸುವ ಇಲ್ಲವೇ ಈಗಾಗಲೇ ಇರುವ ಮೂವರು ಡಿಸಿಎಂ ಹುದ್ದೆ ರದ್ದುಪಡಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಡಿಸಿಎಂ ಹುದ್ದೆ ಸೃಷ್ಠಿಸಿದ್ರೆ ಸಚಿವ ಶ್ರೀರಾಮುಲು ಅವರಿಗೆ ಕೊಡಬೇಕೆಂಬ ಒತ್ತಡ ಕೇಳಿಬಂದಿದೆ.
ಇದೇ ವೇಳೆ ಶ್ರೀರಾಮುಲು ಇಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಿ ಡಿಸಿಎಂ ಹುದ್ದೆ ಬಗ್ಗೆ ಚರ್ಚಿಸಿದ್ದಾರೆ. ನಮ್ಮ ಜನರು ಉಪ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಅಪೇಕ್ಷೆ ಪಡುತ್ತಿದ್ದಾರೆ.ಜನ ನನ್ನನ್ನು ಪ್ರಶ್ನೆ ಮಾಡಿದಾಗ ಉತ್ತರಿಸುವುದು ಕಷ್ಟವಾಗಿದೆ ಹಾಗಾಗಿ ನನಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಬೇಕೆಂದು ಶ್ರೀರಾಮುಲು ಅವರು ಹೇಳಿದ್ದಾರೆ .