ಸಂಬಂಧಗಳಲ್ಲಿ ಜಗಳ ಕಾಮನ್ – ಅದಕ್ಕೆ ಪರಿಹಾರ?

Date:

ಸಂಬಂಧಗಳಲ್ಲಿ ಜಗಳ ಕಾಮನ್ – ಅದಕ್ಕೆ ಪರಿಹಾರ?

ನೀವು ಯಾವ್ದೇ ಸಂಬಂಧವನ್ನು ತೆಗೆದುಕೊಳ್ಳಿ ಕೆಲವೊಮ್ಮೆ ಭಿನ್ನಾಭಿಪ್ರಾಯ , ಜಗಳ ಇದ್ದಿದ್ದೇ. ಪತಿ- ಸತಿಗಳ ನಡುವೆ ಕೂಡ ಜಗಳ ಕಾಮನ್. ಕೆಲವರು ನಾಲ್ಕು ಗೋಡೆಗಳ ನಡುವೆ ಜಗಳವನ್ನು ತಣ್ಣಗಾಗಿಸಿಕೊಳ್ಳುತ್ತಾರೆ. ಕೆಲವರ ಜಗಳ ಬೀದಿ ರಂಪಾಟವಾಗುತ್ತದೆ. ಜಗಳ ಇರಲಿ .ಅದು ಬೀದಿಗೆ ಬರಬಾರದು.. ಪರಸ್ಪರ ದೂಷಣೆ, ಮಾತು – ತಿರುಗೇಟು ಸಹಜ. ಅದು ಇಬ್ಬರ ನಡುವೆಯೇ ಬಗೆಹರಿಯಲಿ.

ಸಂಗಾತಿ ಜತೆಗೆ ಹೀಗೆ ಮಾತನಾಡುತ್ತಿರುವ ವೇಳೆ ನೀವು ಅವರಿಗೆ ಪ್ರತೀ ಸಲ ನೀವು ದೂಷಿಸಲ್ಪಡುತ್ತಿದ್ದೀರಿ ಎಂದು ಹೇಳಿ. ಇದರ ಬಗ್ಗೆ ಮಾತನಾಡಲು ನೀವು ಯಾವುದೇ ಹಿಂಜರಿಕೆ ತೋರಿಸಬೇಡಿ.

ಇಂತಹ ಪರಿಸ್ಥಿತಿ ಬಗ್ಗೆ ಮಾತನಾಡದೆ ಇದ್ದರೆ ಆಗ ಸಂಬಂಧದಲ್ಲಿ ಇದು ಹಾಗೆ ಉಳಿದುಕೊಳ್ಳುವುದು. ಸಂಗಾತಿಯು ನಿಮ್ಮ ಭಾವನೆಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಇದೇ ವೇಳೆ ಸಂಗಾತಿಯು ಏನು ಹೇಳುತ್ತಿರುವರು ಎಂದು ತಿಳಿಯಿರಿ ಹಾಗೂ ನಿಮ್ಮಲ್ಲಿನ ತಪ್ಪಿದ್ದರೆ, ನಡವಳಿಕೆ ಬದಲಾಯಿಸಿಕೊಳ್ಳಿ.

ಸಂಗಾತಿ ತುಂಬಾ ಒರಟಾಗಿ ಸಮಸ್ಯೆಯನ್ನು ಇತ್ಯರ್ಥ ಮಾಡಿದರೆ, ಅದು ಸಮಸ್ಯೆಯಾಗುವುದು. ಹೀಗಾಗಿ ಸಂಗಾತಿಗೆ ಸ್ವಲ್ಪ ಸೌಮ್ಯ ರೀತಿಯಿಂದ ಸಮಸ್ಯೆಯನ್ನು ತಿಳಿಸಲು ಹೇಳಿ.

ನೀವು ಯಾವಾಗಲೂ ದೂಷಿಸಲ್ಪಡುತ್ತಿದ್ದೀರಿ ಎಂದಾಗಿದ್ದರೆ, ಆಗ ಖಂಡಿತವಾಗಿಯೂ ನಿಮ್ಮಲ್ಲಿ ಏನೋ ಸಮಸ್ಯೆಯಿದೆ ಎಂದು ಹೇಳಬಹುದು. ಕೆಲವೊಂದು ಸಲ ವಿಚಾರಗಳು ಮೊದಲ ಸಲ ಬರುವುದು ಮತ್ತು ಇದನ್ನು ತಪ್ಪು ಎಂದು ಹೇಳಬಹುದು.

ಸಂಗಾತಿಯು ಹೇಳುವುದಕ್ಕಿಂತ ವಿರುದ್ಧವಾಗಿ ವರ್ತಿಸುತ್ತಿದ್ದೀರಿ ಎಂದಾಗಿದ್ದರೆ, ಆಗ ಇದನ್ನು ತುಂಬಾ ತಾಳ್ಮೆಯಿಂದ ಹೇಳುವಂತೆ ಹೇಳಿ. ಇದರ ಬಗ್ಗೆ ನೀವಿಬ್ಬರು ಮಾತನಾಡಿ.

ಛೇ, ಪತಿಯು ಪ್ರತೀ ಸಲ ತನ್ನನ್ನೇ ಯಾಕೆ ದೂಷಿಸುತ್ತಿರುವವರು ಎಂದು ನೀವು ಆಲೋಚನೆ ಮಾಡಬೇಕಾಗಿದೆ. ಇದು ನಿಮ್ಮನ್ನೇ ದೂಷಿಸುತ್ತಿರುವರೇ ಅಥವಾ ಬೇರೆ ವಿಚಾರವೇ ಎಂದು ತಿಳಿಯಿರಿ. ದೂಷಣೆ ಎನ್ನುವುದು ನೋವಿನ ಸಂಕೇತವಾಗಿರುವುದು.

ಯಾವುದೇ ವಿಚಾರಕ್ಕೆ ನೀವು ಕಾರಣವಲ್ಲದೆ ಇದ್ದರೆ ಆಗ ನಿಜವಾಗಿಯೂ ನಿಮ್ಮನ್ನು ದೂಷಿಸಲಾಗುತ್ತಿಲ್ಲ ಎಂದು ತಿಳಿಯಿರಿ. ಆಗ ಬೇರೆಯವರು ಇದರ ಬಗ್ಗೆ ನಾಚಿಕೆ ಪಡಬೇಕು. ನೀವು ಇದರ ಬಗ್ಗೆ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ಸಂಗಾತಿಯನ್ನು ಹೆಚ್ಚು ಪ್ರೀತಿಸಿ ಮತ್ತು ಅವರಿಗೆ ವಿಧೇಯರಾಗಿರಿ.

ಸಮಸ್ಯೆ ಬಂದಾಗ ಇದರ ಬಗ್ಗೆ ಏನು ಮಾಡಬೇಕು ಎಂದು ಕೇಳಿ. ನಿಮ್ಮ ಮೇಲೆ ದೂಷಣೆ ಮಾಡುತ್ತಿರುವಾಗ ಅವರ ಕೋಪವನ್ನು ಬೇರೆ ಕಡೆಗೆ ತಿರುಗಿಸಿ.

ನಿಮ್ಮ ಮೇಲೆ ದೂಷಣೆ ಮಾಡುವ ಬದಲು ಇದಕ್ಕೆ ಏನಾದರೂ ಪರಿಹಾರವಿದೆಯಾ ಎಂದು ನೋಡಲು ಪ್ರಯತ್ನಿಸಿ. ಇದು ಒಳ್ಳೆಯ ತಂತ್ರವಾಗಲಿದೆ.

ನಿಮ್ಮ ಕಡೆಯಿಂದ ಎಲ್ಲವೂ ಸರಿಯಾಗಿಯೇ ಇದೆಯಾ ಎಂದು ನೀವು ತಿಳಿಯಿರಿ. ನಿಮ್ಮಿಂದ ಜವಾಬ್ದಾರಿಯಲ್ಲಿ ಯಾವುದೇ ಕೊರತೆ ಆಗುತ್ತಿದೆಯಾ ಎಂದು ಗಮನಿಸಿ. ಇದರಿಂದ ನಿಮ್ಮ ತಪ್ಪು ಎಷ್ಟಿದೆ ಮತ್ತು ಅದೇ ಸಂಗಾತಿಯ ತಪ್ಪು ಎಷ್ಟಿದೆ ಎಂದು ತಿಳಿಯಲು ನಿಮಗೆ ಸಾಧ್ಯವಾಗಲಿದೆ.

ಆದರೆ ನೀವು ಇದನ್ನು ಸರಿಯಾಗಿ ವಿಶ್ಲೇಷಣೆ ಮಾಡಿದರೆ ತುಂಬಾ ಒಳ್ಳೆಯದು. ತಪ್ಪು ಒಂದು ವೇಳೆ ನಿಮ್ಮದೇ ಆಗಿದ್ದರೆ, ಆಗ ನೀವು ಸಂಬಂಧವನ್ನು ಉಳಿಸುವ ದೃಷ್ಟಿಯಿಂದ ಇದರ ಜವಾಬ್ದಾರಿ ತೆಗೆದುಕೊಳ್ಳಿ.

ನಿಮ್ಮ ಜವಾಬ್ದಾರಿ ತೆಗೆದುಕೊಂಡ ಬಳಿ ಸಂಗಾತಿಗೆ ಅವರ ಪಾಲಿನ ಜವಾಬ್ದಾರಿ ತೆಗೆದುಕೊಳ್ಳಲು ಹೇಳಿ. ಸಂಬಂಧವೆನ್ನುವುದು ಒಂದು ತಂಡವಿದ್ದಂತೆ ಮತ್ತು ತಂಡವಾಗಿ ಇಬ್ಬರು ಪ್ರಯತ್ನಿಸಿದೆ ಇದ್ದರೆ ಆಗ ಖಂಡಿತ

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...