ಸಂಬರ್ಗಿ – ದಿವ್ಯ ಫುಲ್ ಕ್ಲೋಸ್! ಇಬ್ಬರ ನಡುವಿನ ಕನೆಕ್ಷನ್ ಏನು?

Date:

ಪ್ರಶಾಂತ್ ಸಂಬರ್ಗಿ ಮತ್ತು ದಿವ್ಯ ಉರುಡುಗ ಬಿಗ್ ಬಾಸ್ ಮನೆಗೆ ಕಾಲಿಟ್ಟ ಕೂಡಲೇ ಇಬ್ಬರೂ ಸಹ ಸಖತ್ ಕ್ಲೋಸ್ ಆಗಿ ಬಿಟ್ಟಿದ್ದಾರೆ. ಈ ಇಬ್ಬರು ಎಷ್ಟರಮಟ್ಟಿಗೆ ಕ್ಲೋಸ್ ಆಗಿದ್ದಾರೆ ಎಂದರೆ ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರನ್ನು ಹಾಕಿಕೊಂಡು ಜೊತೆ ಜೊತೆಯಲಿ ಭಾಗ 2 ಚಿತ್ರೀಕರಣ ಶುರು ಮಾಡಿ ಎನ್ನುತ್ತಿದ್ದಾರೆ. ಹೌದು ಇಬ್ಬರ ನಡುವೆ ಲವ್ ಹುಟ್ಟಿದಂತೆ ಕಾಣುತ್ತಿದೆ ಆದ್ದರಿಂದ ಜೊತೆ ಜೊತೆಯಲಿ ಧಾರಾವಾಹಿಗೆ ಇವರಿಬ್ಬರೂ ಹೇಳಿ ಮಾಡಿಸಿದ ಜೋಡಿ ಎಂದು ಕಾಮೆಂಟ್ ಗಳು ಬರತೊಡಗಿವೆ.

 

 

ಇನ್ನೂ ಬಿಗ್ ಬಾಸ್ ಮನೆಗೆ ಬಂದ ನಂತರ ಇಷ್ಟು ಕ್ಲೋಸ್ ಆಗಿರುವ ಪ್ರಶಾಂತ್ ಸಂಬರಗಿ ಮತ್ತು ದಿವ್ಯಾ ಉರುಡುಗ ಮನೆಗೆ ಬರುವ ಮೊದಲೇ ಸ್ನೇಹಿತರಾಗಿದ್ದರಾ ಎಂಬ ಅನುಮಾನ ಇದೀಗ ಎಲ್ಲರನ್ನು ಕಾಡತೊಡಗಿದೆ. ಹೌದು ಏಕೆಂದರೆ ಇಬ್ಬರ ನಡುವೆ ಇಷ್ಟು ಬೇಗ ಈ ಮಟ್ಟಿಗಿನ ಕ್ಲೋಸ್ ನೆಸ್ ಅಸಾಧ್ಯ , ಹೀಗಾಗಿ ಇಷ್ಟು ಕ್ಲೋಸ್ ಇದ್ದಾರೆ ಎಂದರೆ ಮನೆಯ ಹೊರಗೆ ಇವರಿಬ್ಬರಿಗೂ ಪರಿಚಯ ಇತ್ತು ಎಂದು ಹಲವಾರು ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.

 

 

ಇನ್ನು ಪ್ರಶಾಂತ್ ಸಂಬರ್ಗಿ ದಿವ್ಯ ಉರುಡುಗ ಅವರ ಕೈ ಹಿಡಿದುಕೊಂಡು ಜ್ಯೋತಿಷ್ಯ ಹೇಳುತ್ತೇನೆ ಎಂದು ತುಂಬಾ ಹೊತ್ತಿನ ಕಾಲ ಕೈ ಹಿಡಿದುಕೊಂಡಿದ್ದನ್ನು ಎಲ್ಲರೂ ಗಮನಿಸಿದ್ದಾರೆ. ಅಷ್ಟೇ ಅಲ್ಲದೆ ದಿವ್ಯ ಉರುಡುಗ ಅವರನ್ನು ಎತ್ತಿಕೊಂಡು ಓಡಿದ್ದು ಸಹ ವೀಕ್ಷಕರಲ್ಲಿ ಅನುಮಾನವನ್ನು ಮೂಡಿಸಿದೆ. ಯಾವುದೇ ಕಾರಣವಿಲ್ಲದೆ ಸುಮ್ಮನೆ ಆಕೆಯನ್ನು ಎತ್ತಿಕೊಂಡಿದ್ದು ಇದೀಗ ಟ್ರೋಲ್ ಗೆ ಒಳಗಾಗಿದೆ. ಇವರಿಬ್ಬರ ಕೆಮಿಸ್ಟ್ರಿ ಎಲ್ಲಿಗೆ ಹೋಗಿ ಮುಟ್ಟುತ್ತೊ ಕಾದು ನೋಡೋಣ.

 

 

Share post:

Subscribe

spot_imgspot_img

Popular

More like this
Related

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...

ತುಳಸಿ ಗಿಡದಲ್ಲಿನ ಈ ಬದಲಾವಣೆಗಳು ನೀಡುವ ಸೂಚನೆಗಳೇನು..?

ತುಳಸಿ ಗಿಡದಲ್ಲಿನ ಈ ಬದಲಾವಣೆಗಳು ನೀಡುವ ಸೂಚನೆಗಳೇನು..? ಮನೆಯ ಅಂಗಳದಲ್ಲಿ ಬೆಳೆದ ತುಳಸಿ...

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್ ಬೆಂಗಳೂರು:...