ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೋಪಗೊಂಡಿದ್ದರು. ಮೂಲಗಳ ಪ್ರಕಾರ, ಸಂಸತ್ ಕಲಾಪಕ್ಕೆ ಹಾಜರಾಗದ ಸಂಸದರು ಮೋದಿ ಕೋಪಕ್ಕೆ ಕಾರಣ ಎನ್ನಲಾಗ್ತಿದೆ. ಕಲಾಪಕ್ಕೆ ಯಾವ ಯಾವ ಸಂಸದರು ಹಾಜರಾಗಿಲ್ಲ ಎನ್ನುವ ಪಟ್ಟಿಯನ್ನು ಮೋದಿ ಕೇಳಿದ್ದಾರೆ.
ಗೈರಾದ ಸಂಸದರ ಬಗ್ಗೆ ವಿಪಕ್ಷಗಳು ದೂರುತ್ತವೆ. ಈ ಬಗ್ಗೆ ನನಗೆ ಅನೇಕ ಪತ್ರಗಳು ಬಂದಿವೆ. ಯಾಕೆ ಸಂಸದರು ಗೈರಾಗುತ್ತಿದ್ದಾರೆಂದು ಮೋದಿ ಪ್ರಶ್ನಿಸಿದ್ದಾರೆ. ಸಂಜೆಯೊಳಗೆ ಗೈರಾದ ಸಂಸದರ ಹೆಸ್ರು ಹಾಗೂ ಕಾರಣ ನನಗೆ ಬೇಕೆಂದು ಮೋದಿ ಹೇಳಿದ್ದಾರೆ ಎನ್ನಲಾಗಿದೆ.
ಸಭೆಯಲ್ಲಿ ದೇಶದಲ್ಲಿ ಹೆಚ್ಚಾಗಿರುವ ನೀರಿನ ಸಮಸ್ಯೆ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಅಧಿಕಾರಿಗಳ ಜೊತೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ ಎಂದು ಸಂಸದರಿಗೆ ಪಿಎಂ ಸಲಹೆ ನೀಡಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಂತೆ ಪಿಎಂ ಸೂಚನೆ ನೀಡಿದ್ದಾರೆ.