ಸಕ್ಕರೆ ಇಲ್ಲದೆ ಬ್ಲ್ಯಾಕ್ ಕಾಫಿ ಕುಡಿತಿದ್ದೀರಾ ?

Date:

ಕಾಫಿ ಎಂದಾಕ್ಷಣ ತಟ್ಟನೆ ನೆನಪಾಗುವುದು ಬೆಳಗಿನ ಬೆಡ್ ಕಾಫಿ ಮತ್ತು ಸಂಜೆಯ ಇಡೀ ದಿನದ ಸುಖ ಸಂತೋಷಗಳನ್ನು ಮೆಲುಕು ಹಾಕುತ್ತಾ ಕುಡಿಯುವ ಕಾಫಿ . ಕಾಫಿ ಒಂದು ರೀತಿಯ ಚಟ . ಒಮ್ಮೆ ಕುಡಿದರೆ ಮತ್ತದೇ ಸಮಯಕ್ಕೆ ಮತ್ತೊಮ್ಮೆ ಕುಡಿಯುವ ಬಯಕೆ . ಇಲ್ಲದಿದ್ದರೆ ಯಾವ ಕೆಲಸ ಮಾಡಲಿಕ್ಕೂ ಮನಸ್ಸೇ ಬರುವುದಿಲ್ಲ. ಕೆಲವರಂತೂ ನಾನು ಇಂದು ಕಾಫಿ ಕುಡಿದೇ ಇಲ್ಲಾ ಅದಕ್ಕೆ ತಲೆ ನೋಯುತ್ತಿದೆ ಎಂದು ಹೇಳುತ್ತಾರೆ . ಕಾಫಿ ಗೆ ಅನೇಕ ಔಷಧೀಯ ಗುಣಗಳಿದ್ದು ಎಲ್ಲವೂ ಆರೋಗ್ಯಕ್ಕೆ ಅನುಕೂಲಕರವೇ ಆಗಿದೆ . ನಾವು ಇಂದು ಕಾಫಿ ಯಲ್ಲೇ ಇನ್ನೊಂದು ವಿಧವಾದ ಬ್ಲಾಕ್ ಕಾಫಿ ಬಗ್ಗೆ ಮಾತನಾಡುತ್ತಿದ್ದೇವೆ. ಬ್ಲಾಕ್ ಕಾಫಿ ಸರಿಯಾದ ಪ್ರಮಾಣದಲ್ಲಿ ಸೇವಿಸಿದ್ದೇ ಆದರೆ ನಮ್ಮ ದೇಹದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ.
ಬ್ಲ್ಯಾಕ್ ಕಾಫಿಯನ್ನು ಸಕ್ಕರೆ ಹಾಕದೆ ಕುಡಿದರೆ ಅದು ನಮ್ಮ ಆರೋಗ್ಯವನ್ನು ಕಾಪಾಡಲು ತುಂಬಾ ನೆರವಾಗುವುದು ಎಂದು ಅಧ್ಯಯನಗಳು ಕಂಡುಕೊಂಡಿವೆ. ಕಾಫಿಯು ಚಯಾಪಚಯ, ಮೆದುಳಿನ ಶಕ್ತಿ ವೃದ್ಧಿಸುವುದು ಮತ್ತು ತೂಕ ಇಳಿಸಲು ಕೂಡ ಇದು ಸಹಕಾರಿ. ಪ್ರತಿನಿತ್ಯವೂ ಸಕ್ಕರೆ ಹಾಕದೆ ಎರಡು ಕಪ್ ಬ್ಲ್ಯಾಕ್ ಕಾಫಿ ಕುಡಿಯಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡುವರು.
ನೆನಪಿನ ಶಕ್ತಿ ವೃದ್ಧಿಸುವುದು
ನಾವಿಂದು ಹೆಚ್ಚಾಗಿ ಮೊಬೈಲ್, ಕಂಪ್ಯೂಟರ್ ಗಳ ಮೇಲೆ ಸಂಪೂರ್ಣವಾಗಿ ಅಲವಂಬಿತರಾಗಿರು ವುದರಿಂದ ನೆನಪಿನ ಶಕ್ತಿಯು ಕುಂದುತ್ತಿರುವುದು ಸಹಜ. ಇದಕ್ಕಾಗಿ ನೀವು ಬ್ಲ್ಯಾಕ್ ಕಾಫಿ ಸೇವನೆ ಮಾಡಿದರೆ ಅದು ನೆನಪಿನ ಶಕ್ತಿ ವೃದ್ಧಿಸುವುದು. ಬ್ಲ್ಯಾಕ್ ಕಾಫಿಯು ಮೆದುಳು ಚುರುಕಾಗಿರಲು ಮತ್ತು ನೆನಪಿನ ಶಕ್ತಿ ವೃದ್ಧಿಸಲು ನೆರವಾಗುವುದು. ನರಗಳನ್ನು ಕ್ರಿಯಾಶೀಲವಾಗಿ ಇಡುವ ಇದು ಬುದ್ಧಮಾಂದ್ಯತೆ ತಡೆಯುವುದು.
ಬುದ್ಧಶಕ್ತಿ ವೃದ್ಧಿ
ಕಾಫಿಯಲ್ಲಿರುವಂತಹ ಕೆಫಿನ್ ಅಂಶವು ಮನೋಪ್ರಭಾವಕ ಉತ್ತೇಜಕವಾಗಿ ಕೆಲಸ ಮಾಡುವುದು. ಇದಕ್ಕೆ ದೇಹವು ಸ್ಪಂದಿಸಿದ ವೇಳೆ ಆಗ ಮನಸ್ಥಿತಿ, ಶಕ್ತಿ ಮತ್ತು ಅರಿವಿನ ಕ್ರಿಯೆಗಳು ಉತ್ತಮವಾಗುವುದು. ಇದರಿಂದ ನೀವು ಬುದ್ದಿಶಕ್ತಿಯನ್ನು ಹೆಚ್ಚಿಸಬಹುದಾಗಿದೆ.
ಹೊಟ್ಟೆ ಶುಚಿಗೊಳಿಸುವುದು
ದೇಹದಲ್ಲಿ ವಿಷಕಾರಿ ಅಂಶಗಳು ಶೇಖರಣೆ ಆದರೆ ಆಗ ಖಂಡಿತವಾಗಿಯೂ ಅದು ನಮ್ಮ ದೇಹದಲ್ಲಿ ಅನಾರೋಗ್ಯ ಉಂಟು ಮಾಡುವುದರಲ್ಲಿ ಎರಡು ಮಾತಿಲ್ಲ. ಸಕ್ಕರೆ ಹಾಕದೆ ಎರಡು ಕಪ್ ಬ್ಲ್ಯಾಕ್ ಕಾಫಿ ಕುಡಿದರೆ ಅದರಿಂದ ದೇಹದ ವಿಷಕಾರಿ ಅಂಶ ಹಾಗೂ ಬ್ಯಾಕ್ಟೀರಿಯಾವನ್ನು ಅದು ಹೊರಗೆ ಹಾಕಲು ನೆರವಾಗುವುದು. ಕಾಫಿಯು ಮೂತ್ರವರ್ಧಕವಾಗಿ ಕೆಲಸ ಮಾಡುವುದು.
ತೂಕ ಇಳಿಸಲು
ತೂಕ ಇಳಿಸಲು ದೃಢ ನಿರ್ಧಾರ ಮಾಡಿಕೊಂಡಿರುವವರು ವ್ಯಾಯಾಮ ಹಾಗೂ ಸರಿಯಾದ ಆಹಾರ ಕ್ರಮದ ಜತೆಗೆ ಎರಡು ಕಪ್ ಬ್ಲ್ಯಾಕ್ ಕಾಫಿಯನ್ನು ದಿನಕ್ಕೆರಡು ಬಾರಿ ಕುಡಿಯಬೇಕು. ಇದು ದೇಹದಲ್ಲಿ ಶೇ.50ರಷ್ಟು ಚಯಾಪಚಯ ವೃದ್ಧಿಸಲು ನೆರವಾಗುವುದು ಮತ್ತು ಇದರಿಂದ ಹೊಟ್ಟೆಯ ಕೊಬ್ಬು ಕರಗಲು ನೆರವಾಗುವುದು.
ಹೃದಯದ ಕಾಯಿಲೆಗಳಿಂದ ಮುಕ್ತಿ
ಹೃದಯದ ಆರೋಗ್ಯವು ಚೆನ್ನಾಗಿದ್ದರೆ ಆಗ ನಮಗೆ ಹೆಚ್ಚಿನ ಸಮಸ್ಯೆಗಳು ಕಾಡದು. ಹೃದಯದ ಆರೋಗ್ಯವನ್ನು ಕಾಪಾಡಲು ಸಕ್ಕರೆ ಹಾಕದೆ ಬ್ಲ್ಯಾಕ್ ಕಾಫಿ ಕುಡಿಯಬೇಕು. ಕಾಫಿಯು ದೇಹದಲ್ಲಿ ಉರಿಯೂತ ಕಡಿಮೆ ಮಾಡುವುದು. ಇದರಿಂದಾಗಿ ಅಪಧಮನಿ ಕಾಯಿಲೆಗಳ ಅಪಾಯವು ಕಡಿಮೆ ಆಗುವುದು.
ದೇಹಕ್ಕೆ ಸಾಕಷ್ಟು ಆಂಟಿಆಕ್ಸಿಡೆಂಟ್
ಆಂಟಿಆಕ್ಸಿಡೆಂಟ್ ದೇಹದಲ್ಲಿ ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸುವುದು. ಒಂದು ಕಪ್ ಬ್ಲ್ಯಾಕ್ ಕಾಫಿಯನ್ನು ಸಕ್ಕರೆ ಹಾಕದರೆ ಕುಡಿದರೆ ಅದರಿಂದ ದೇಹಕ್ಕೆ ಹಲವಾರು ರೀತಿಯ ಆಂಟಿಆಕ್ಸಿಡೆಂಟ್ ಗಳು ಲಭ್ಯವಾಗುವುದು. ಒಂದು ಕಪ್ ಕಾಫಿಯಲ್ಲಿ ವಿಟಮಿನ್ ಬಿ2, ಬಿ3, ಮತ್ತು ಬಿ5, ಮ್ಯಾಂಗನೀಸ್, ಮೆಗ್ನಿಶಿಯಂ ಮತ್ತು ಪೊಟಾಶಿಯಂ ಸಾಕಷ್ಟು ಪ್ರಮಾಣದಲ್ಲಿದೆ.

Share post:

Subscribe

spot_imgspot_img

Popular

More like this
Related

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಬೆಂಗಳೂರು: ನಿಷ್ಠಾವಂತ ರಾಜಕಾರಣಿಯಾಗಿದ್ದ...

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌ ಬೆಂಗಳೂರು:...

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್...

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ ವಿಜಯಪುರ: ವಿಜಯಪುರ ನಗರದಲ್ಲಿ ಮತ್ತೊಮ್ಮೆ ಭೂಕಂಪನದ...