ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ ನೂತನ ಸಚಿವರುಗಳ ಪಟ್ಟಿಯಲ್ಲಿ ಆಯ್ಕೆಯಾದ ಸರಳ ವ್ಯಕ್ತಿತ್ವದ ಪ್ರತಾಪ್ ಸಾರಂಗಿ ಅವರು ವಿಶ್ವದ ಗಮನವನ್ನು ಸೆಳೆಯುತ್ತಿದ್ದಾರೆ.
ಸಾರಂಗಿ ಅವರಿಗೆ ಇಂದು ಮೋದಿ ಅವರು ಅತಿ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆ, ಪಶು ಸಂಗೋಪಣೆ, ಹೈನುಗಾರಿಕೆ, ಮೀನುಗಾರಿಕೆ ಸಚಿವರನ್ನಾಗಿ ನೇಮಕ ಮಾಡಿದ್ದಾರೆ.
ಒಡಿಶಾದ ಬಾಲಸೋರೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಸಾರಂಗಿ ಅವರು ಬಿಜೆಡಿ ಎಂಪಿ ಹಾಗೂ ಉದ್ಯಮಿ ರಬೀಂದ್ರ ಕುಮಾರ್ ಜೇನ್ ವಿರುದ್ಧ ಭರ್ಜರಿ ಜಯವನ್ನು ಸಾಧಿಸಿ ಸಂಸತ್ ಮೊದಲ ಬಾರಿ ಸಂಸತ್ ಪ್ರವೇಶಿಸಿದರು.
ಇವರ ಕಠಿಣ ಶ್ರಮ ಹಾಗೂ ದೃಢ ನಿರ್ಧಾರಕ್ಕೆ ಮೊದಲ ಪ್ರಯತ್ನದಲ್ಲೇ ಸಚಿವರ ಸ್ಥಾನ ದೊರಕಿದೆ. ಚಿಕ್ಕ ಗುಡಿಸಲಿನಲ್ಲಿ ಏಕಾಂಗಿಯಾಗಿ ವಾಸಿಸುವ ಇವರಿಗೆ ಜನರ ಜತೆ ಬೆರೆತು ಅವರ ಕಷ್ಟಗಳಿಗೆ ಸ್ಪರ್ಧಿಸುವುದು ನಿತ್ಯದ ಕೆಲಸ.
ಅದಲ್ಲದೆ ತಮ್ಮ ಜೀವನ ಶೈಲಿಯಲ್ಲೂ ಸಾಮಾನ್ಯರಂತೆ ಇದ್ದು ಪ್ರಯಾಣಿಸಲು ತಮ್ಮ ಸ್ವಂತ ಸೈಕಲ್ ನ್ನು ಬಳಸಿಕೊಳ್ಳುತ್ತಾರೆ. ವಿಶೇಷವೆಂದರೆ ತಮ್ಮ ಲೋಕಸಭಾ ಚುನಾವಣಾ ಪ್ರಚಾರಕ್ಕೂ ತಮ್ಮ ಸೈಕಲ್ ನಲ್ಲೇ ಪ್ರಯಾಣ ಬೆಳೆಸಿ ದೇಶದ ಗಮನ ಸೆಳೆದಿದ್ದರು.
2004 ಹಾಗೂ 2009ರಲ್ಲಿ ಒಡಿಶಾ ಅಸ್ಲೆಂಬಿಗೆ ಸ್ಪರ್ಧಿಸಿ ಜಯವನ್ನು ಸಾಧಿಸಿದ್ದರು. 2014ರ ಲೋಕಸಭಾ ಚುನಾವಣೆಯಲ್ಲೂ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು.
ಇವರು ಫಕೀರ್ ಮೋಹನ್ ಕಾಲೇಜಿನಲ್ಲಿ ಪದವಿ ಪಡೆದ ಬಳಿಕ ಉತ್ತರ ವಾಗ್ಮಿಯಾಗಿ ಹೊರ ಹೊಮ್ಮಿದರು. ಸಂಸ್ಕೃತದಲ್ಲಿ ಹಿಡಿತವಿದ್ದ ಇವರು ಸನ್ಯಾಸತನದತ್ತ ಮುಖ ಮಾಡಲು ಚಿಂತಿಸಿದರು. ರಾಮಕೃಷ್ಣ ಮಠಕ್ಕೆ ತೆರಳಿದ ಇವರಿಗೆ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿತು. ನಂತರ ಹಿಂದುಳಿದ ಹಳ್ಳಿಗಳ ಅಭಿವೃದ್ಧಿಯಲ್ಲಿ ಕೈಜೋಡಿಸಿದರು. ನಂತರ ಆರ್ ಎಸ್ ಎಸ್ ಹಾಗೂ ವಿಶ್ವ ಹಿಂದೂ ಪರಿಷತ್ ಜತೆ ಸೇರಿಕೊಂಡರು.