ಕಾಂಗ್ರೆಸ್ ಅನ್ನು ತೊರೆದು ಅನರ್ಹ ಶಸಕರೆನಿಸಿಕೊಂಡು ಮತ್ತೆ ಉಪಚುನಾವಣೆಯಲ್ಲಿ ಬಿಜೆಪಿ ಮುಲಕ ಕಣಕ್ಕೆ ಇಳಿದಿದು ಗೆದ್ದು ಮರು ಆಯ್ಕೆಯಾಗಿರುವ ಬಿ.ಸಿ. ಪಾಟೀಲ್ ಅವರಿಗೆ ಕ್ಷೇತ್ರದಾದ್ಯಂತ ಸಾರ್ವಜನಿಕರು ಸನ್ಮಾನ ಕಾರ್ಯಕ್ರಮ ಏರ್ಪಡಿಸುತ್ತಿದ್ದು, ಈ ಕುರಿತಂತೆ ಮಾತನಾಡಿರುವ ಬಿ.ಸಿ. ಪಾಟೀಲ್ ನನಗೆ ಹಾರ ಹಾಕಿ ಸನ್ಮಾನಿಸುವುದು ಬೇಡ ಎಂದು ಹೇಳಿದ್ದಾರೆ.
ಸನ್ಮಾನ ಹಾಗೂ ಹಾರಕ್ಕಾಗಿ ಖರ್ಚು ಮಾಡುವ ಹಣವನ್ನು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಾಮ ಮಂದಿರಕ್ಕೆ ಸಲ್ಲಿಸೋಣ ಎಂದು ಅವರು ಹೇಳಿದ್ದು, ಇದರಿಂದ ಕ್ಷೇತ್ರದ ಜನರ ಭಕ್ತಿ ಸಮರ್ಪಿಸಿದಂತಾಗುತ್ತದೆ ಎಂದು ತಿಳಿಸಿದ್ದಾರೆ ಹಾಗೆ ಈ ರೀತಿಯ ನಿರ್ಧಾರಗಳನ್ನು ಎಲ್ಲಾ ನಾಯಕರು ತೆಗೆದುಕೊಳ್ಳಬೇಕು ಎಂದು ಜನ ಸಾಮನ್ಯರು ಚರ್ಚಿಸುತ್ತಿದ್ದಾರೆ ಎನ್ನಲಾಗುತ್ತಿದೆ.