ಕರ್ನಾಟಕದಾದ್ಯಂತ ಪ್ರಸ್ತುತ ಭಾರೀ ಚರ್ಚೆಗೀಡಾಗಿರುವ ವಿಷಯವೆಂದರೆ ಅದು ಆಕ್ಸಿಜನ್ ಕೊರತೆಯ ವಿಷಯ. ಮೊನ್ನೆಯಷ್ಟೇ ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯುಂಟಾಗಿ ಬರೋಬ್ಬರಿ 24 ಮಂದಿ ಕೊರೊನಾ ಸೋಂಕಿತರು ಮೃತಪಟ್ಟರು ಮತ್ತು ಹುಬ್ಬಳ್ಳಿಯಲ್ಲಿಯೂ ಸಹ 5 ಜನ ಸೋಂಕಿತರು ಮೃತಪಟ್ಟರು. ಇಷ್ಟು ದಾರುಣ ಮಟ್ಟಕ್ಕೆ ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದ ಸಾವುಗಳು ಉಂಟಾಗುತಿದ್ದು ಪ್ರತಿ ಜಿಲ್ಲೆಗಳಲ್ಲಿಯೂ ಸಹ ಆಕ್ಸಿಜನ್ ಕೊರತೆ ತಲೆದೋರಿದೆ.
ಇಷ್ಟು ದಿನಗಳ ಕಾಲ ಮಂಡ್ಯ ಜಿಲ್ಲೆಯಲ್ಲಿ ಯಾವುದೇ ರೀತಿಯ ಆಕ್ಸಿಜನ್ ಕೊರತೆ ಇಲ್ಲ ಎಂದು ಹೇಳಲಾಗುತ್ತಿತ್ತು ಆದರೆ ಇತ್ತೀಚೆಗೆ ಮಂಡ್ಯ ಜಿಲ್ಲೆಯಲ್ಲಿಯೂ ಸಹ ಆಕ್ಸಿಜನ್ ಕೊರತೆ ಉಂಟಾಗಿದೆ. ಈ ವಿಷಯದಿಂದ ಎಚ್ಚೆತ್ತ ಮಂಡ್ಯ ಜಿಲ್ಲೆಯ ಸಂಸದೆ ಸುಮಲತಾ ಅಂಬರೀಶ್ ತಮ್ಮ ಸ್ವಂತ ದುಡ್ಡಿನಲ್ಲಿ 2 ಸಾವಿರ ಲೀಟರ್ ಆಕ್ಸಿಜನ್ ಅನ್ನು ಮಂಡ್ಯ ಜಿಲ್ಲೆಗೋಸ್ಕರ ಖರೀದಿಸಿದ್ದಾರೆ.
ಸರ್ಕಾರ ಆಕ್ಸಿಜನ್ ಸರಬರಾಜು ಮಾಡುವವರೆಗೆ ಕಾಯದ ಸುಮಲತಾ ಅಂಬರೀಷ್ ಮಂಡ್ಯ ಜನರ ಕ್ಷೇಮಕ್ಕಾಗಿ ಇರಿಸುವ ಕೆಲಸವನ್ನು ಮಾಡಿದ್ದು ಜನರಿಂದ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಹಾಗೂ ಇನ್ನೊಂದೆಡೆ 2 ತಿಂಗಳುಗಳಿಂದ ಮಂಡ್ಯ ಜಿಲ್ಲೆಯತ್ತ ತಲೆಯನ್ನು ಹಾಕದಿದ್ದ ಸುಮಲತಾ ಅವರು ದಿಢೀರನೆ ಈ ರೀತಿಯ ಕೆಲಸ ಮಾಡುತ್ತಿರುವುದು ಆರೋಪಗಳಿಂದ ತಪ್ಪಿಸಿಕೊಳ್ಳಲು ಎಂಬ ಮಾತುಗಳು ಹರಿದಾಡುತ್ತಿವೆ.