ಸಾಧನೆ ಮಾಡಿದ ಪಿವಿ ಸಿಂಧು; ಸೈನಾ ನೆಹ್ವಾಲ್ ಹೊಟ್ಟೆಕಿಚ್ಚು ಬಹಿರಂಗ!

Date:

ಪ್ರಸ್ತುತ ನಡೆಯುತ್ತಿರುವ ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಸತತವಾಗಿ ಗೆಲ್ಲುವುದರ ಮೂಲಕ ಸೆಮಿಫೈನಲ್ ಹಂತವನ್ನು ಪ್ರವೇಶಿಸಿದ ಪಿವಿ ಸಿಂಧು, ಸೆಮಿಫೈನಲ್ ಸುತ್ತಿನಲ್ಲಿ ಸೋಲುವುದರ ಮೂಲಕ ಚಿನ್ನದ ಪದಕ ಗೆಲ್ಲುವ ರೇಸ್ ನಿಂದ ಹೊರಬಿದ್ದಿದ್ದರು. ನಂತರ ಕಂಚಿನ ಪದಕದ ಸುತ್ತಿನಲ್ಲಿ ಜಯ ಗಳಿಸುವುದರ ಮೂಲಕ ಒಲಿಂಪಿಕ್ಸ್ ನಲ್ಲಿ ಈ 2 ಪದಕಗಳನ್ನು ಗೆದ್ದ ಭಾರತೀಯ ಆಟಗಾರ್ತಿ ಎಂಬ ದಾಖಲೆಯನ್ನು ಬರೆದರು.

2016ರ ರಿಯೋ ಒಲಿಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಮೊದಲನೆಯ ಒಲಿಂಪಿಕ್ಸ್ ಪದಕವನ್ನು ಗೆದ್ದಿದ್ದರು ಮತ್ತು ಈ ವರ್ಷ ಮತ್ತೊಂದು ಒಲಿಂಪಿಕ್ಸ್ ಪದಕವನ್ನು ಗೆದ್ದಿದ್ದಾರೆ. ಪಿವಿ ಸಿಂಧು ಮಾಡಿರುವ ಈ ದಾಖಲೆಗೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ ಸಚಿನ್ ತೆಂಡೂಲ್ಕರ್, ಸೆಹ್ವಾಗ್ ಗೌತಮ್, ಗಂಭೀರ್ ಸೇರಿದಂತೆ ಹಲವಾರು ಕ್ರಿಕೆಟಿಗರು ,ಸಿನಿಮಾ ನಟರು, ದೊಡ್ಡ ದೊಡ್ಡ ರಾಜಕಾರಣಿಗಳೆಲ್ಲ ಪಿ ವಿ ಸಿಂಧುಗೆ ಶುಭ ಹಾರೈಸಿದ್ದಾರೆ.

ಆದರೆ ಮತ್ತೋರ್ವ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಮತ್ತು ಪಿವಿ ಸಿಂಧು ಕುರಿತಾಗಿ ಒಂದೇ ಒಂದು ಟ್ವೀಟ್ ಕೂಡ ಮಾಡಿಲ್ಲ! ತನಗಿಂತ ದೊಡ್ಡ ದಾಖಲೆ ಮಾಡಿರುವ ಪಿ ವಿ ಸಿಂಧುಗೆ ಅಭಿನಂದನೆ ಸಲ್ಲಿಸುವ ಬದಲಾಗಿ ಹಾಕಿತಂಡದ ವಿಡಿಯೋವೊಂದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರೀಟ್ವೀಟ್ ಮಾಡುವ ಮುಖಾಂತರ ಪಿವಿ ಸಿಂಧು ಸಾಧನೆ ಮೇಲೆ ತನಗಿರುವ ಹೊಟ್ಟೆಕಿಚ್ಚನ್ನು ಪರೋಕ್ಷವಾಗಿ ಸೈನಾ ನೆಹ್ವಾಲ್ ಬಹಿರಂಗಪಡಿಸಿಕೊಂಡಿದ್ದಾರೆ.

ಸದ್ಯ ಪಿವಿ ಸಿಂಧುಗೆ ಶುಭ ಕೋರುವ ಬದಲು ಹಾಕಿ ಆಟದ ವಿಡಿಯೋವೊಂದನ್ನು ರೀಟ್ವೀಟ್ ಮಾಡುವ ಮೂಲಕ ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿರುವ ಸೈನಾ ನೆಹ್ವಾಲ್ ಸದ್ಯ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಒಲಿಂಪಿಕ್ಸ್ ಇತಿಹಾಸದಲ್ಲಿ ಪಿವಿ ಸಿಂಧು ಇದುವರೆಗೂ ಒಂದು ಪದಕವನ್ನು ಮಾತ್ರ ಗೆದ್ದಿದ್ದಾರೆ.

Share post:

Subscribe

spot_imgspot_img

Popular

More like this
Related

ನಿತ್ಯ ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ..! ಆದರೆ ಈ ಕೆಲಸ ಮಾಡ್ಬೇಡಿ!

ನಿತ್ಯ ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ..! ಆದರೆ ಈ ಕೆಲಸ...

ಕಾರಾಗೃಹದಲ್ಲಿ ಅತ್ಯಾಚಾರಿಗಳಿಗೆ, ಉಗ್ರರಿಗೆ ರಾಜಾತಿಥ್ಯಕ್ಕೆ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ

ಕಾರಾಗೃಹದಲ್ಲಿ ಅತ್ಯಾಚಾರಿಗಳಿಗೆ, ಉಗ್ರರಿಗೆ ರಾಜಾತಿಥ್ಯಕ್ಕೆ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ಬೆಂಗಳೂರು: ಪರಪ್ಪನ...

ಪರಪ್ಪನ ಅಗ್ರಹಾರ ಜೈಲಲ್ಲಿ ಬಿಂದಾಸ್ ಲೈಫ್: ಇಬ್ಬರು ಅಧಿಕಾರಿಗಳ ತಲೆದಂಡ

ಪರಪ್ಪನ ಅಗ್ರಹಾರ ಜೈಲಲ್ಲಿ ಬಿಂದಾಸ್ ಲೈಫ್: ಇಬ್ಬರು ಅಧಿಕಾರಿಗಳ ತಲೆದಂಡ ಬೆಂಗಳೂರು: ಪರಪ್ಪನ...

ಜೈಲಿನ ರಾಜಾತಿಥ್ಯದ ವಿಡಿಯೋ ರಿಲೀಸ್: ದರ್ಶನ್ ಆಪ್ತ ಧನ್ವೀರ್ ಸಿಸಿಬಿ ವಶಕ್ಕೆ!

ಜೈಲಿನ ರಾಜಾತಿಥ್ಯದ ವಿಡಿಯೋ ರಿಲೀಸ್: ದರ್ಶನ್ ಆಪ್ತ ಧನ್ವೀರ್ ಸಿಸಿಬಿ ವಶಕ್ಕೆ! ರೇಣುಕಾಸ್ವಾಮಿ...