No menu items!
13.4 C
Munich
Sunday, April 19, 2026

ದ್ವಿತ್ವ ಚಿತ್ರಕ್ಕೆ ತ್ರಿಷಾ ನಟಿ; ಪುನೀತ್ ಫ್ಯಾನ್ಸ್ ಗೋಳು ಕೇಳೋರು ಯಾರು?

Must read

2014ರಲ್ಲಿ ತೆಲುಗಿನ ದೂಕುಡು ಸಿನಿಮಾದ ರಿಮೇಕ್ ಕನ್ನಡ ಕನ್ನಡದಲ್ಲಿ ‘ಪವರ್’ ಎಂದು ಪುನೀತ್ ರಾಜ್ ಕುಮಾರ್ ಅವರಿಗೆ ಕೆ ಮಾದೇಶ್ ನಿರ್ದೇಶನ ಮಾಡಿದ್ದು ನಿಮಗೆಲ್ಲಾ ತಿಳಿದೇ ಇದೆ. ಆ ಚಿತ್ರಕ್ಕೆ ತಮಿಳಿನ ತ್ರಿಷಾ ಅವರನ್ನು ನಾಯಕಿಯಾಗಿ ಕರೆತರಲಾಗಿತ್ತು. ಅಥವಾ ತಮಿಳಿನ ತ್ರಿಷಾ ಕನ್ನಡ ಚಿತ್ರಕ್ಕೆ ಬರ್ತಿದ್ದಾರೆ ಅಭಿನಯ ಚೆನ್ನಾಗಿಯೇ ಮಾಡಿರುತ್ತಾರೆ ಎಂದು ಥಿಯೇಟರ್ ಗೆ ಹೋಗಿ ಬಂದವರಿಗೆ ಸಿಕ್ಕಿದ್ದು “ಜಿಲೇಬಿ ಮುಖದವಳು”..

ಪುನೀತ್ ತ್ರಿಷಾಳನ್ನು ನೋಡಿ ಒಂದೊಮ್ಮೆ ಚಿತ್ರದಲ್ಲಿ ಜಿಲೇಬಿ ಮುಖದವಳು ಎಂದು ರೇಗಿಸುತ್ತಾರೆ. ಅದು ಚಿತ್ರದಲ್ಲಿನ ಆಕೆಯ ಪಾತ್ರಕ್ಕೆ ಹೇಳಿದ್ದಾ ಅಥವಾ ಚಿತ್ರದಲ್ಲಿನ ಆಕೆಯ ನಟನೆಗೆ ಹೇಳಿದ್ದಾ ಅನ್ನೋದು ಇಂದಿಗೂ ಕಾಡುವ ಪ್ರಶ್ನೆಯೇ ಸರಿ.. ಈ ಪ್ರಶ್ನೆ ಯಾಕೆ ಕಾಡ್ತಿದೆ ಅನ್ನೋದು ಪವರ್ ಚಿತ್ರದಲ್ಲಿ ತ್ರಿಷಾ ನಟನೆಯನ್ನು ನೋಡಿದವರಿಗೆ ಅರ್ಥವಾಗುತ್ತದೆ. ಹೀಗೆ ಪವರ್ ಚಿತ್ರದಲ್ಲಿ ಅಭಿನಯಿಸಿದ ನಂತರ ಮತ್ತೆ ತಮಿಳು ಚಿತ್ರಗಳಲ್ಲಿ ತ್ರಿಷಾಗೆ ಸಾಲು ಸಾಲು ಆಫರ್ ಬರತೊಡಗಿದವು. ನಂತರ ಆಕೆ ಮತ್ತೆ ಕಾಲಿವುಡ್ ಸೇರಿಕೊಂಡು ಇದೀಗ ಪುನಃ ಪುನೀತ್ ಚಿತ್ರವೊಂದಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ!

ಹೌದು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಪವನ್ ಕುಮಾರ್ ನಿರ್ದೇಶನದಲ್ಲಿ ಪುನೀತ್ ರಾಜ್ ಕುಮಾರ್ ನಾಯಕ ನಟನಾಗಿ ಅಭಿನಯಿಸಲಿರುವ ದ್ವಿತ್ವ ಚಿತ್ರಕ್ಕೆ ತ್ರಿಷಾಳನ್ನು ನಾಯಕಿಯಾಗಿ ಘೋಷಣೆ ಮಾಡಲಾಗಿದೆ. ಹೊಂಬಾಳೆ ಫಿಲ್ಮ್ಸ್ ಈ ವಿಷಯವನ್ನು ಅಧಿಕೃತವಾಗಿ ಘೋಷಣೆ ಮಾಡಿದ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ತಮ್ಮ ಗೋಳನ್ನು ತೋಡಿಕೊಳ್ಳಲು ಆರಂಭಿಸಿದ್ದಾರೆ. ಪವನ್ ಕುಮಾರ್ ಚಿತ್ರಗಳಲ್ಲಿ ಕತೆಗೆ ಹೆಚ್ಚಿನ ಒತ್ತು ಇರುತ್ತದೆ, ಹೀಗಾಗಿ ಆ ಚಿತ್ರಗಳಲ್ಲಿನ ಪಾತ್ರಧಾರಿಗಳು ಪಾತ್ರದಲ್ಲಿ ಅಭಿನಯಿಸುವುದು ಮಾತ್ರವಲ್ಲ ಆ ಪಾತ್ರಕ್ಕೆ ಜೀವ ತುಂಬುವ ಹಾಗಿರಬೇಕು.

 

ಆದರೆ ತ್ರಿಷಾ ಆಯ್ಕೆ ಎಷ್ಟು ಸರಿ ಎಂಬುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿರುವ ವಿಷಯ. ಕೆಲ ಅಭಿಮಾನಿಗಳು ಈಕೆಯ ನಟನೆಯನ್ನು ನಾವು ಪವರ್ ಚಿತ್ರದಲ್ಲಿಯೇ ಕಂಡಿದ್ದೇವೆ, ನಿಮಗೆ ಬೇರೆ ಯಾರೂ ಸಿಗಲಿಲ್ಲವೇ? ಕನ್ನಡದಲ್ಲಿಯೇ ಪ್ರತಿಭಾವಂತ ನಟಿಯರು ತುಂಬಾ ಜನ ಇದ್ದಾರೆ ಅಂತವರಿಗಾದರೂ ಅವಕಾಶ ಕೊಡಿ ಪರಭಾಷಾ ನಟಿಯರನ್ನು ತಂದು ಡೈಲಾಗ್ ಬೇರೆನೇ ಕೇಳಿಸುತ್ತಿದ್ದರೆ ಅವರ ತುಟಿಗಳೇ ಬೇರೆಯದ್ದನ್ನು ಹೇಳುತ್ತಿರುತ್ತವೆ ಎಂದು ತ್ರಿಷಾ ಆಯ್ಕೆಯ ವಿರುದ್ಧ ಕಿಡಿಕಾರುತ್ತಿದ್ದಾರೆ.

 

ಇಲ್ಲಿ ಚರ್ಚೆಯಾಗುತ್ತಿರುವ ವಿಷಯ ಏನೆಂದರೆ ತ್ರಿಷಾಗೆ ನಟನೆ ಬರುವುದಿಲ್ಲ ಎಂಬುದಲ್ಲ.. ತ್ರಿಶಾಗೆ ಕನ್ನಡ ಚಿತ್ರಗಳಲ್ಲಿ ನಟನೆ ಅಷ್ಟು ಸುಲಭವಾಗಿ ಬರುವುದಿಲ್ಲ ಎಂಬುದು.. ಪವರ್ ಚಿತ್ರದಲ್ಲಿ ಆಕೆಯ ಅಭಿನಯ ನೋಡಿದರೆ ಈ ಅನಿಸಿಕೆ ನಿಮ್ಮಲ್ಲೂ ಕೂಡಾ ವ್ಯಕ್ತವಾಗುತ್ತದೆ. ಕೇವಲ ತ್ರಿಷಾ ಮಾತ್ರ ಅಲ್ಲ ಇತ್ತೀಚೆಗೆ ಬಿಡುಗಡೆಯಾದ ಯುವರತ್ನ ಚಿತ್ರದ ಸಾಯೇಷಾ ಕಥೆ ಕೂಡ ಅಷ್ಟೇ!

ಆದರೆ ನಟ ಸಾರ್ವಭೌಮ ಚಿತ್ರದಲ್ಲಿ ಅಭಿನಯಿಸಿದ್ದ ಅನುಪಮಾ ಪರಮೇಶ್ವರ್ ಅವರನ್ನು ಖಡಾಖಂಡಿತವಾಗಿ ಈ ಪಟ್ಟಿಗೆ ಸೇರಿಸಲು ಸಾಧ್ಯವೇ ಇಲ್ಲ.. ಈಕೆಗೆ ಕನ್ನಡ ಬರುತ್ತೇನೋ ಎನ್ನುವ ರೇಂಜಿಗೆ ಅನುಪಮಾ ಪರಮೇಶ್ವರನ್ ನಟ ಸಾರ್ವಭೌಮ ಚಿತ್ರದಲ್ಲಿ ಸರಿಯಾದ ರೀತಿ ಅಭಿನಯಿಸಿದ್ದರು..

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article