ಭಾರಿ ಮಳೆಯಿಂದ ರೈತರು ಬೆಳೆದ ಕಡಲೆ ಬೆಳೆ ನಾಶವಾಗಿರುವ ಕಾರಣ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬಬ್ಬೂರು ಗ್ರಾಮಕ್ಕೆ ಭೇಟಿನೀಡಿದ ಕಂದಾಯ ಸಚಿವ ಆರ್. ಅಶೋಕ್ ಅವರು
ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಚಿತ್ರದುರ್ಗ ಶಾಸಕ ತಿಪ್ಪ ರೆಡ್ಡಿ , ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ರೈತರೊಂದಿಗೆ ಮಾತನಾಡಿ ದ ಅಶೋಕ್
ಸೂಕ್ತ ಪರಿಹಾರ ಒದಗಿಸುವಭರವಸೆ ನೀಡಿದ್ದಾರೆ. ಹಿರಿಯರು ಪಟ್ಟಣ ಸುದ್ದಿಗಾರರೊಂದಿಗೆ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಆರ್ ಅಶೋಕ್ ಅವರು ನಾಳೆ ಯಡಿಯೂರಪ್ಪ ಅವರು ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಸಿ ಎಂ ಅವರು ಅವರ ಸ್ತಾನ ಮುಂದುವರಿಸ ಬೇಕೆಂದು ನಮ್ಮ ಅಸೆ,
ಕೇಂದ್ರದ ನಾಯಕರು ಸಹ ಸಿಎಂ ಬದಲಾವಣೆ ಬಗ್ಗೆ ಮಾತನಾಡಿಲ್ಲ. ಜೊತೆಗೆ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟ ಅಶೋಕ್ ಅವರು ನಮ್ಮ ಸರ್ಕಾರ ಹಣಕಾಸಿನ ಸಮಸ್ಯೆಗೆ ಜೊತೆಗೆ ಕೋವಿಡ್ ಸಮಸ್ಯೆಯನ್ನು ಎದುರಿಸುತ್ತಿದೆ ಆದರೆ ಸಿದ್ದರಾಮಯ್ಯ ಸರ್ಕಾರ ಸುಖದಲ್ಲೇ ಕಾಲ ಕಳೆದಿತ್ತು ಹಾಗಾಗಿ ನಮ್ಮ ಸರ್ಕಾರದ ಮೇಲೆ ಟೀಕೆ ಮಾಡುತ್ತಿದಾರೆ ಎಂದು ಹೇಳಿದ್ದಾರೆ.