ಡಿಕೆಶಿ ತಾವು ಬೆಂಗಳೂರಿಗೆ ಬರುವಾಗ ಬಾರಿ ಅಭಿಮಾನಿಗಳು ಬೆಂಬಲಿಗರು ಅಧ್ದುರಿ ಸ್ವಾಗತ ಮಾಡಿದ್ದರು ಆ ಸಂದರ್ಭದಲ್ಲಿ ಡಿಕೆಶಿ ಜೆಡಿಎಸ್ ಭಾವುಟ ಹಿಡಿದು ಕೊಂಡಿದ್ದಕ್ಕೆ ಸಿದ್ದು ಆಕ್ರೊಶ ವೆಕ್ತಪಡಿಸಿದ್ದಕ್ಕೆ ಕಾಂಗ್ರೆಸ್ ಹೈಕಮಾಂಡ್ ಜೊತೆಗೆ ಡಿ.ಕೆ. ಶಿವಕುಮಾರ್ ಉತ್ತಮ ಸಂಬಂಧ ಹೊಂದಿರುವುದು ಮತ್ತು ಡಿಕೆಶಿಗೆ ಅದ್ದೂರಿ ಸ್ವಾಗತ ದೊರೆತದ್ದರಿಂದ ಸಿದ್ಧರಾಮಯ್ಯನವರು ಹಾಗೆ ಮಾತನಾಡಿದ್ದಾರೆ. ಉದ್ದೇಶಪೂರ್ವಕವಾಗಿ ಸಿದ್ದರಾಮಯ್ಯ ಇಂತಹ ಸಂದರ್ಭದಲ್ಲಿ ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ ಎನ್ನಲಾಗಿದೆ.
ಈ ಕುರಿತಾಗಿ ಡಿಕೆಶಿ ಬಳಿ ಆಪ್ತರು ಹೇಳಿಕೊಂಡಿದ್ದು, ಸದ್ಯಕ್ಕೆ ಸುಮ್ಮನಿರಿ ಪರ-ವಿರೋಧವಾಗಿ ಮಾತನಾಡಬೇಡಿ. ಯಾವುದಕ್ಕೂ ಪ್ರತಿಕ್ರಿಯೆ ನೀಡಬೇಡಿ ಎಂದು ಆಪ್ತರಿಗೆ ಡಿಕೆಶಿ ಸೂಚನೆ ನೀಡಿದ್ದಾರೆನ್ನಲಾಗಿದೆ.