ಸಿನಿಮಾದಲ್ಲಿ ಗೌರಮ್ಮ, ಮಾಲ್ಡೀವ್ಸ್‌ನಲ್ಲಿ ಬಿಚ್ಚಮ್ಮ; ಬಿಕಿನಿ ಧರಿಸಿದವಳ ಕಥೆ ಪಾಪ

Date:

ತಮಿಳು ಸಿನಿಮಾರಂಗದ ಖ್ಯಾತ ಹಾಸ್ಯನಟಿ ವಿದ್ಯುಲ್ಲೇಖಾ ರಮಣ್ ಸದ್ಯ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚಿಗಷ್ಟೆ ಹಸೆಮಣೆ ಏರಿದ್ದ ನಟಿ ವಿದ್ಯುಲ್ಲೇಖಾ ಇದೀಗ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ. ನಟಿ ವಿದ್ಯುಲ್ಲೇಖಾ ಸೆಪ್ಟಂಬರ್ 9ರಂದು ಫಿಟ್ನೆಸ್ ಟ್ರೈನರ್ ಸಂಜಯ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಬಳಿಕ ಪತಿ ಜೊತೆ ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗಿರುವ ನಟಿ ವಿದ್ಯುಲ್ಲೇಖಾ ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವಿದ್ಯುಲ್ಲೇಖಾ ಬಿಕಿನಿ ಫೋಟೋಗಳೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹಳದಿ ಬಣ್ಣದ ಬಿಕಿನಿ ಧರಿಸಿ ಬೀಚ್‌ನಲ್ಲಿ ಕುಳಿತು ಪೋಸ್ ನೀಡಿರುವ ಫೋಟೋಗೆ ಅನೇಕರು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ನಿಮ್ಮ ವಿಚ್ಛೇದನ ಯಾವಾಗ? ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಈ ಬಗ್ಗೆ ವಿದ್ಯುಲ್ಲೇಖಾ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ವಿದ್ಯುಲ್ಲೇಖಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಹಾಯ್ ಫ್ರೆಂಡ್ಸ್, ನನ್ನ ವಿಚ್ಛೇದನ ಯಾವಾಗಾ? ಹೀಗೆ ಅನೇಕ ಮೆಸೇಜ್ ಗಳು ನನಗೆ ಬರುತ್ತಿವೆ. ಇದು ಕೇವಲ ನಾನು ಸ್ವಿಮ್ ಸೂಟ್ ಹಾಕಿದ್ದೀನಿ ಎನ್ನುವ ಕಾರಣಕ್ಕೆ. ವಾವ್..1920ರ ಅಂಕಲ್ ಆಂಟಿ ಕಾಲದಿಂದ ಹೊರಬನ್ನಿ. ಇದು 2021ಕ್ಕೆ ಬನ್ನಿ. ಇಲ್ಲಿ ಸಮಸ್ಯೆ ಆಗಿರುವುದು ನೆಗೆಟಿವ್ ಕಾಮಂಟ್ ಅಲ್ಲ. ನಾವು ಯೋಚಿಸುವ ರೀತಿಯಾಗಿದೆ. ಆಕೆಯ ವಿಚ್ಛೇದನಕ್ಕೆ ಮಹಿಳೆಯ ಉಡುಪು ಕಾರಣವಾಗುವುದೇ ಆಗಿದ್ದರೆ ಎಲ್ಲರೂ ಸರಿಯಾಗಿ ಉಡುಪು ಧರಿಸಿ ಸಂತೋಷದ ದಾಂಪತ್ಯದಲ್ಲಿ ಇರಬೇಕಲ್ಲವೇ? ನನ್ನ ಗಂಡನನ್ನು ಪಡೆಯಲು ನಾನು ಅದೃಷ್ಟ ಮಾಡಿದ್ದೀನಿ. ಈ ಬಗ್ಗೆ ನಿರ್ಲಕ್ಷಿಸಿ, ಪ್ರತಿಕ್ರಿಯೆ ನೀಡಬೇಡಿ ಎಂದು ಹೇಳಿದರು. ಆದರೆ ನಾನು ಪ್ರತಿಕ್ರಿಯೆ ನೀಡುತ್ತಿದ್ದೀನಿ” ಎಂದು ಹೇಳಿದ್ದಾರೆ.

“ನಾನು ನಿಮ್ಮ ವಿಷಕಾರಿ, ಸಂಕುಚಿತ ಮನೋಭಾವವನ್ನು ಬದಲಾಯಿಸಲು ಸಾಧ್ಯವಿಲ್ಲ. ನಿಮ್ಮ ಜೀವನದಲ್ಲಿ ಮಹಿಳೆಯರು, ಲೈಂಗಿಕತೆ, ದಬ್ಬಾಳಿಕೆ ಮತ್ತು ನೇರ ಅವಮಾನಕರ ರೀತಿಯಲ್ಲಿ ನೀವು ಮಹಿಳೆಯ ಮತ್ತು ಆಕೆಯ ಪ್ರತ್ಯೇಕತೆಯ ನೀಡುತ್ತೀರಿ ಎಂದು ನಾನು ಭಾವಿಸುತ್ತೇನೆ. ಬದುಕು ಮತ್ತು ಬದುಕಲು ಬಿಡಿ” ಎಂದು ದೀರ್ಘವಾಗಿ ಪೋಸ್ಟ್ ಹಾಕಿದ್ದಾರೆ.

Share post:

Subscribe

spot_imgspot_img

Popular

More like this
Related

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ಬಿಜೆಪಿಯವರಿಗೆ...

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...