ಕಲಾವಿದರ ಮಕ್ಳು ಕಲಾವಿದರಾಗುವುದು ಸಾಮಾನ್ಯ. ಯಾಕೆಂದರೆ ಕಲೆ ರಕ್ತದಲ್ಲಿಯೇ ಇರುತ್ತೆ. ಇದಕ್ಕೆ ದುನಿಯಾ ವಿಜಿ ಪುತ್ರಿ ಇನ್ನೊಂದು ಉದಾಹರಣೆ ಆಗಿದ್ದಾರೆ. ದುನಿಯಾ ವಿಜಯ್ ಅವರ ಹಿರಿಯ ಪುತ್ರಿ ಮೊನಿಕಾ, ಬಣ್ಣದ ಪ್ರಪಂಚಕ್ಕೆ ಬರಲಿದ್ದಾರೆ ಎಂಬ ಸುದ್ದಿಯನ್ನ ಹಿಂದೆ ನೀವೂ ಕೇಳಿರಬಹುದು. ಆದರೆ ಈಗ ಆ ಸುದ್ದಿ ನಿಜವಾಗ್ತಿದೆ. ಮೋನಿಕಾ ಮೊದಲ ಚಿತ್ರಕ್ಕೆ ವೇದಿಕೆ ಸಜ್ಜಾಗಿದೆ.
ಗುರು ಶಿಷ್ಯರು.. ಜಂಟಲ್ ಮೆನ್ ಚಿತ್ರವನ್ನ ನಿರ್ದೇಶಿಸಿದ್ದ ಜಡೇಶ್ ಕುಮಾರ್ ಹಂಪಿ ಮೋನಿಕಾ ವಿಜಯ್ ಕುಮಾರ್ ಅವರ ಮೊದಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಇವರು ಕಾಟೇರ ಚಿತ್ರದ ಕಥೆಯನ್ನ ಬರೆದಿದ್ದು , ಇದೇ ಜಡೇಶ್ ಕುಮಾರ್ ಹಂಪಿ.
ಮೋನಿಕಾ ಕೇವಲ ದುನಿಯಾ ವಿಜಯ್ ನಾಮಬಲದಿಂದ ನಾಯಕಿಯಾಗ್ತಿಲ್ಲ. ನಾಯಕಿಯಾಗಲು ಬೇಕಾದ ತಯಾರಿಗಳನ್ನೆಲ್ಲ ಮಾಡಿಕೊಂಡೇ ಮೋನಿಕಾ ಚಿತ್ರರಂಗಕ್ಕೆ ಕಾಲಿಡ್ತಿದ್ದಾರೆ. ರಂಗಭೂಮಿಯಲ್ಲಿ ನಟನೆಯ ಪಟ್ಟುಗಳನ್ನ ಕಲಿತಿದ್ದಾರೆ. ಇಷ್ಟೇ ಅಲ್ಲ ಮುಂಬೈನಲ್ಲಿ ಅನುಪಮ್ ಖೇರ್ ನಟನಾ ಶಾಲೆಯಲ್ಲಿ ಕೂಡ ಮೋನಿಕಾ ತರಬೇತಿ ತಗೆದುಕೊಂಡಿದ್ದಾರೆ.
ಹೀಗಾಗಿಯೇ ಪುತ್ರಿಯ ಮೊದಲ ಕನವರಿಕೆ ಹಾಗೂ ಕನಸಿನ ಬಗ್ಗೆ ಸಿಕ್ಕಾಪಟ್ಟೆ ಎಕ್ಸಾಯಟ್ ಆಗಿರುವ
ದುನಿಯಾ ವಿಜಯ್ ಮೊದಲ ಪ್ರಯತ್ನದಲ್ಲಿ ಪುತ್ರಿ ಮೋನಿಕಾ ಕನ್ನಡಿಗರ ಹೃದಯ ಗೆಲ್ಲುತ್ತಾಳೆ ಎಂಬ ವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ. ಶ್ರಮ ಅವರದ್ದು. ಫಲ ಆ ಭಗವಂತನದ್ದು. ಮಕ್ಕಳ ಭವಿಷ್ಯವನ್ನ ನೋಡುವುದು ನನ್ನ ಸೌಭಾಗ್ಯವೆಂದಿದ್ದಾರೆ.