ಬೀದಿಬದಿ , ಅದರಲ್ಲೂ ರಾತ್ರಿ ಹುಡುಗಿಯರನ್ನು ಚುಡಾಯಿಸುವ, ಹೋಗೋ-ಬರೋರಿಗೆಲ್ಲಾ ತೊಂದರೆ ಕೊಡುವ ರಾತ್ರಿ ರೋಡ್ ರೋಮಿಯಾಗಳಿಗೆ ಪೊಲೀಸರು ಶಾಕ್ ನೀಡಿದ್ದಾರೆ.
ರೋಡ್ ರೋಮಿಯಾಗಳ ಮೇಲೆ ಕಣ್ಣಿಟ್ಟಿರುವ ಪೊಲೀಸರು ಕಾರ್ಯಾಚರಣೆ ಶುರುಮಾಡಿದ್ದಾರೆ. ಡಿಸಿಪಿ ಎನ್ ಶಶಿಕುಮಾರ್ ನೇತೃತ್ವದಲ್ಲಿ ಈ ವಿಶೇಷ ಕಾರ್ಯಚರಣೆ ನಡೆದಿದೆ. ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಹಿಳೆಯರನ್ನು ಚುಡಾಯಿಸುತ್ತಿದ್ದ ಬರೋಬ್ಬರಿ 210 ಮಂದಿಯನ್ನು ವಶಕ್ಕೆ ಪಡೆದು ಎಚ್ಚರಿಸಿದ್ದಾರೆ ಪೊಲೀಸರು. ಪೊಲೀಸರ ಕೆಲಸಕ್ಕೆ ಸಾರ್ವಜನಿಕವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
ರೋಡ್ ರೋಮಿಯಾಗಳನ್ನು ವಶಕ್ಕೆ ಪಡೆದು ಅವರ ಪೋಷಕರನ್ನು ಕರೆಸಿ, ಹೆತ್ತವರ ಎದುರೇ ಬುದ್ಧಿ ಹೇಳಿ ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟಿದ್ದಾರೆ. ಈ ರೋಡ್ ರೋಮಿಯಾಗಳಲ್ಲಿ ಅನೇಕರು ರೌಡಿಶೀಟರ್ ಗಳೆಂದು ತಿಳಿದುಬಂದಿದೆ.
ರೋಡ್ ರೋಮಿಯಾಗಳ ಕಾಟ ಜಾಸ್ತಿಯಾಗಿದ್ದು, ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿ ಹೊಡೆತ ನೀಡಿರುವುದು ಶ್ಲಾಘನೀಯ. ಇದರಿಂದ ಹೆಣ್ಮಕ್ಕಳು , ಸಾರ್ವಜನಿಕರು ನೆಮ್ಮದಿಯಿಂದ ಓಡಾಡುವಂತಾಗುತ್ತದೆ.
ಹಗಲಿಗಿಂತ ರಾತ್ರಿಯಂತೂ ಹೆಣ್ಣು ಮಕ್ಕಳು ಈ ರೋಡ್ ರೋಮಿಯಾಗಳ ಕಾಟದಿಂದ ಆಫೀಸಿಂದ ಮನೆಗೆ ಹೋಗಲು ಭಯಪಡುತ್ತಾರೆ. ಇದೆಕ್ಕೆಲ್ಲಾ ಬ್ರೇಕ್ ಹಾಕಲು ಪೊಲೀಸರು ತಯಾರಾಗಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ರಾತ್ರೋರಾತ್ರಿ ಒಬ್ಬಿಬ್ಬರಲ್ಲ 210 ಮಂದಿ ರೋಡ್ ರೋಮಿಯಾಗಳಿಗೆ ಪೊಲೀಸ್ ಶಾಕ್..!
Date: