ಮೊದಲ ಬಾರಿಗೆ ಸ್ಯಾಂಡಲ್ ವುಡ್ ನ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ನಟಿಸಿ ನಿರ್ದೇಶನ ಮಾಡುತ್ತಿರುವ ಸಲಗ ಚಿತ್ರ ಈಗಾಗಲೇ ಮೇಕಿಂಗ್ ನಲ್ಲೇ ಭಾರಿ ಕುತೂಹಲವನ್ನು ಮೂಡಿಸುವುದರ ಮೂಲಕ ಅಭಿಮಾನಿಗಳಲ್ಲಿ ಚಿತ್ರದ ಮೇಲೆ ನಿರೀಕ್ಷೆ ದುಪಟ್ಟಾಗುವಂತೆ ಮಾಡಿದೆ, ಅದರಲ್ಲೂ ಆರಂಭದಿಂದಲೂ ತೆರೆಮೇಲೆ ನಾಯಕನಾಗಿ ಅಬ್ಬರಿಸಿದ್ದ ನಟ ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ಡೈರೆಕ್ಷನ್ ಕ್ಯಾಪ್ ತೊಟ್ಟು ಆಕ್ಷನ್ ಕಟ್ ಹೇಳಲು ತಯಾರಿಯನ್ನು ನಡೆಸಿದ್ದಾರೆ.
ದುನಿಯಾ ವಿಜಯ್ ಅವರ ಈ ಹೊಸ ಪ್ರಯತ್ನಕ್ಕೆ ಶಿವಣ್ಣ, ಸುದೀಪ್ ಸೇರಿದಂತೆ ಹಲವರು ಶುಭಕೋರಿರುವುದು ಚಿತ್ರತಂಡಕ್ಕೆ ಇನ್ನಷ್ಟು ಹುಮ್ಮಸ್ಸನ್ನು ನೀಡಿದೆ.
ನಟ ದುನಿಯಾ ವಿಜಯ್ ತನ್ನ ಮೊದಲ ನಿರ್ದೇಶನದ ‘ಸಲಗ’ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ಗಣ್ಯರನ್ನು ಆಹ್ವಾನಿಸುವ ಉದ್ದೇಶದಿಂದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಸುದೀಪ್ ಸೇರಿದಂತೆ ಹಲವು ಸ್ಟಾರ್ ಗಳನ್ನ ಈಗಾಗಲೇ ದುನಿಯಾ ವಿಜಯ್ ಮತ್ತು ಕೆ ಪಿ ಶ್ರೀಕಾಂತ್ ಸೇರಿದಂತೆ ಚಿತ್ರತಂಡ ಭೇಟಿ ಮಾಡಿದ್ದಾರೆ.
ಜೂನ್ 6 ರಂದು ಬಂಡಿ ಮಹಾಕಾಳಮ್ಮ ದೇವಾಲಯದಲ್ಲಿ ನಡೆಯಲಿರುವ ಸಲಗ ಚಿತ್ರದ ಮೂಹೂರ್ತ ಕಾರ್ಯಕ್ರಮಕ್ಕೆ ಚಿತ್ರರಂಗದ ಅನೇಕ ಗಣ್ಯರು ಆಗಮಿಸಲಿದ್ದು ಇದೀಗ ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಕೂಡಾ ಸಲಗ ಚಿತ್ರತಂಡ ಭೇಟಿ ಮಾಡಿಸಿದ್ದರಾಮಯ್ಯ ಚಿತ್ರದ ಮುಹೂರ್ತಕ್ಕೆ ಆಹ್ವಾನವನ್ನು ನೀಡಿದ್ದಾರೆ.