ಸುಟ್ಟ ಆಹಾರ ತಿಂದರೆ ಕ್ಯಾನ್ಸರ್ ಬರಬಹುದು ಎಚ್ಚರ ?

Date:

ಇಂದಿನ ಆಧುನಿಕ ಯುಗದಲ್ಲಿ ಜನರು ಸರಿಯಾಗಿ ಪೋಷ್ಟಿಕಾಂಶ ಆಹಾರ ತಿನ್ನುವುದನ್ನೇ ಬಿಟ್ಟುಬಿಟ್ಟಿದ್ದಾರೆ. ಎರಡು ನಿಮಿಷದಲ್ಲಿ ತಯಾರಾಗೋ ಫಾಸ್ಟ್ಫುಸ್ಟ್ಗೆ ಅಡ್ಜೆಸ್ಟ್ ಆಗಿ ಹೋಗಿದ್ದಾರೆ. ಅದ್ರಲ್ಲೂ ಬ್ರೆಡ್, ರೊಟ್ಟಿ…ಎಲ್ಲವನ್ನೂ ತುಸು ಹೆಚ್ಚು ಸುಟ್ಟರೂ ರುಚಿ ಕೆಡುತ್ತದೆ. ಆದರೆ, ಕೆಲವೊಮ್ಮೆ ಅನಿವಾರ್ಯವಾಗಿ ತಿನ್ನಬೇಕಾಗುತ್ತದೆ. ಆದರೆ, ಇಂಥ ಆಹಾರವನ್ನು ಪದೆ ಪದೇ ತಿನ್ನುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಅನ್ನೋದು ಒಂದು ಸಂಶೋಧನೆ ದೃಢಪಡಿಸಿದೆ.
ಆಹಾರ ಪದಾರ್ಥಗಳು ಕಪ್ಪಾಗುವಷ್ಟು ಒಲೆ ಮೇಲಿಟ್ಟಾಗ ಆಸ್ಪಾರಾಜೀನ್ ಎಂಬ ಅಂಶ ಬಿಡುಗಡೆಯಾಗುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತೆ. ಸುಟ್ಟ ಆಹಾರ ಪದಾರ್ಥಗಳು ನರಗಳನ್ನು ಆ್ಯಕ್ಟಿವ್ ಆಗಿ ಇಡುವಲ್ಲಿ ವಿಫಲವಾಗುತ್ತದೆ. ಡಿಎನ್ಎಯನ್ನೇ ಹಾಳು ಮಾಡಿ, ಜೀವಕೋಶಗಳನ್ನೇ ಹಾಳು ಮಾಡುವಷ್ಟು ಈ ಅಂಶಗಳು ಹಾನಿಯನ್ನುಂಟು ಮಾಡುತ್ತದೆ.


ಆದ್ದರಿಂದ ಒಲೆ ಮೇಲಿಟ್ಟ ಆಹಾರ ಸುಡದಂತೆ ಅಥವಾ ಬುಡ ಹಿಡಿಯದಂತೆ ತಡೆಯಲು ಸಣ್ಣ ಉರಿಯಲ್ಲಿಯೇ ಅಡುಗೆ ಮಾಡುವುದನ್ನು ರೂಢಿಸಿಕೊಳ್ಳುವುದು ಒಳಿತು. ಇದರಿಂದ ಗ್ಯಾಸ್ ಉಳಿಯುವುದಲ್ಲದೇ, ಆಹಾರವೂ ಕರಕಲಾಗುವುದಿಲ್ಲ. ಇದು ಆರೋಗ್ಯವಂತ ಮನುಷ್ಯನಿಗೆ ಅಗತ್ಯವೆಂಬುವುದು WHO ನಡೆಸಿದ ಸಂಶೋಧನೆಯಿಂದ ದೃಢಪಟ್ಟಿದೆ.

Share post:

Subscribe

spot_imgspot_img

Popular

More like this
Related

ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ಪಿಸ್ತಾಗಳ ಸೇವನೆ ಒಳ್ಳೆಯದು

ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ಪಿಸ್ತಾಗಳ ಸೇವನೆ ಒಳ್ಳೆಯದು ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ವಿಶೇಷ...

ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಸಿಲ್ವರ್ ಎಲಿಫೆಂಟ್ ಪ್ರಶಸ್ತಿ

ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಸಿಲ್ವರ್ ಎಲಿಫೆಂಟ್ ಪ್ರಶಸ್ತಿ ಭಾರತ್ ಸ್ಕೌಟ್ಸ್...

ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅಂತ ಇರೋ ಬೋರ್ಡ್ ಬದಲಾವಣೆ ಮಾಡೋದು ಒಳ್ಳೆಯದು: ನಿಖಿಲ್ ಕುಮಾರಸ್ವಾಮಿ

ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅಂತ ಇರೋ ಬೋರ್ಡ್ ಬದಲಾವಣೆ ಮಾಡೋದು ಒಳ್ಳೆಯದು:...

ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಮನದಾಳದ ಮಾತು…

ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಮನದಾಳದ ಮಾತು…. ಬೆಂಗಳೂರು: ಅರವಿಂದ ವೆಂಕಟೇಶ ರೆಡ್ಡಿ...