Home ಎಲ್ಲೆಲ್ಲಿ ಏನೇನು.? ಸಿಎಂ‌ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರು ಹುಬ್ಬಳಿಯ ಖಾಸಗಿ ಹೋಟೆಲ್​ನಲ್ಲಿ ಭೇಟಿ !? ಕಾರಣ ಗೊತ್ತಾ ?

ಸಿಎಂ‌ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರು ಹುಬ್ಬಳಿಯ ಖಾಸಗಿ ಹೋಟೆಲ್​ನಲ್ಲಿ ಭೇಟಿ !? ಕಾರಣ ಗೊತ್ತಾ ?

0
ಸಿಎಂ‌ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರು ಹುಬ್ಬಳಿಯ ಖಾಸಗಿ ಹೋಟೆಲ್​ನಲ್ಲಿ ಭೇಟಿ !? ಕಾರಣ ಗೊತ್ತಾ ?

ಇತ್ತೀಚಿಗೆ ನಿಧನರಾದ ಸಚಿವ ಸಿ.ಎಸ್ ಶಿವಳ್ಳಿ, ಪ್ರತಿನಿಧಿಸುತ್ತಿದ್ದ​ ಕುಂದಗೋಳ ಕ್ಷೇತ್ರದ ಉಪಚುನಾವಣೆ ಮೈತ್ರಿ ಸರ್ಕಾರದ ಕಾಂಗ್ರೆಸ್​​ಗೆ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ. ಹೀಗಾಗಿ ಇಂದು ಸಿಎಂ ಕುಮಾರಸ್ವಾಮಿ ಜೆಡಿಎಸ್​ ಮೈತ್ರಿಪಕ್ಷದ ನಾಯಕರಾಗಿ ಕುಂದಗೋಳದಲ್ಲಿ ಪ್ರಚಾರ ನಡೆಸಲು ಆಗಮಿಸಿದ್ದರು.

ಈ ವೇಳೆ ಅವರು ತಂಗಿದ್ದ ಹೋಟೆಲ್​ಗೆ, ಸಿದ್ದರಾಮಯ್ಯ ಆಗಮಿಸಿದ್ದರು. ಆದರೆ ಅವರಿಬ್ಬರು ಒಂದೆ ಕಡೆಯಿದ್ದರು ಸಹ ಉಪಚುನಾವಣೆ ಸಮಯದಲ್ಲಿ ಭೇಟಿಯಾಗದಿರುವುದು, ಮೈತ್ರಿ ಸರ್ಕಾರದಲ್ಲಿ ಬುಗಿಲೆದ್ದ ಭಿನ್ನಾಭಿಪ್ರಾಯಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ ಎನ್ನಲಾಗುತ್ತಿದೆ.

ಭೇಟಿಯಾಗಿದ್ದು ಕುತುಹಲಕ್ಕಿಡುಮಾಡಿದೆ ಆದರೆ ಇದೆ ವೇಳೆ ಸಿದ್ದರಾಮಯ್ಯನವರು, ಮಾಜಿ‌ ಸಭಾಪತಿ ಬಸವರಾಜ್ ಹೊರಟ್ಟಿ ಹಾಗೂ ಸಚಿವ ಬಂಡೆಪ್ಪ ಕಾಶಂಪೂರ್ ಸೇರಿದಂತೆ ಹಲವಾರು ನಾಯಕರ ಭೇಟಿ ಮಾಡಿದ್ದಾರೆ. ಇನ್ನೊಂದೆಡೆ ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ಜಮೀರ್ ಅಹ್ಮದ್ ಪರಸ್ಪರ ಮಾತುಕತೆ ನಡೆಸಿದ್ದಾರೆ ಅಂತಾ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here