ಅಭಿನಯ ಚಕ್ರವರ್ತಿ , ಬಾದ್ ಷಾ ಕಿಚ್ಚ ಸುದೀಪ್ ಅಭಿಮಾನಿಗಳು ಈ ಸ್ಟೋರಿಯನ್ನು ನೋಡಲೇ ಬಾರದು…! ಯಾಕಂದ್ರೆ ಇದು ಕಿಚ್ಚನ ಅಭಿಮಾನಿಗಳಿಗೆ ಬೇಜಾರಾಗುವ ಸುದ್ದಿ..!
ವಿಷಯ ಏನಪ್ಪ ಅಂದ್ರೆ, ಎಲ್ಲರಿಗೂ ಗೊತ್ತೇ ಇರುವಂತೆ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಪೈಲ್ವಾನ್ ರಿಲೀಸ್ ಗೆ ರೆಡಿಯಾಗಿದೆ. ಡೈರೆಕ್ಟರ್ ಹೆಬ್ಬುಲಿ ಕೃಷ್ಣ , ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಕಾಂಬಿನೇಷನ್ ನಲ್ಲಿ ಬರುತ್ತಿರುವ ಪೈಲ್ವಾನ್ ಒಟ್ಟು 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ಪೈಲ್ವಾನ್ ವಿಶ್ವದಾದ್ಯಂತ ಸದ್ದು ಮಾಡಲಿದೆ.
ಆದರೆ , ಸುದೀಪ್ ಫ್ಯಾನ್ಸ್ ಗೆ ಸಿಕ್ಕಾಪಟ್ಟೆ ಬೇಜಾರಿನ ಸುದ್ದಿಯೊಂದು ಬಂದಿದೆ. ಪೈಲ್ವಾನ್ ವರಮಹಾಲಕ್ಷ್ಮಿ ಹಬ್ಬಕ್ಕೆ ಆಗಸ್ಟ್ 9 ರಂದು ರಿಲೀಸ್ ಆಗಲಿದೆ ರಂದು ಹೇಳಲಾಗಿತ್ತು. ಆದರೆ ಇದೀಗ ಪೈಲ್ವಾನ್ ರಿಲೀಸ್ ಡೇಟ್ ಮುಂದೂಡಲ್ಪಟ್ಟಿದೆ ಎನ್ನಲಾಗಿದ್ದು, ಕಿಚ್ಚನ ಅಭಿಮಾನಿಗಳಲ್ಲಿ ಬೇಸರ ಮನೆ ಮಾಡಿದೆ.
ಹೌದು, ಪೈಲ್ವಾನ್ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಗಣೇಶ ಚತುರ್ಥಿ ಹಬ್ಬದ ಸಮಯದಲ್ಲಿ ಆಗಸ್ಟ್ 29 ಕ್ಕೆ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ . ಸೆಪ್ಟೆಂಬರ್ 2ಕ್ಕೆ ಸುದೀಪ್ ಹುಟ್ಟುಹಬ್ಬವಿದ್ದು ಆ ವೇಳೆಯಲ್ಲೇ ಪೈಲ್ವಾನ್ ಗಿಫ್ಟ್ ಕೊಡುತ್ತಾರೆ ಎನ್ನಲಾಗಿದೆ. ಗಣೇಶ ಹಬ್ಬ , ಸುದೀಪ್ ಬರ್ತ್ ಡೇಟೈಮ್ ಲ್ಲಿ ಪೈಲ್ವಾನ್ ಅಬ್ಬರ ಶುರುವಾಗಲಿದೆ.
ಹೀಗಾಗಿ ಸುದೀಪ್ ಅಭಿಮಾನಿಗಳಿಗೆ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗಿರುವ ಬೇಸರ. ಆದರೆ ಸುದೀಪ್ ಬರ್ತ್ ಡೇ ಟೈಮ್ ಲ್ಲೇ ರಿಲೀಸ್ ಆಗುವ ಸಾಧ್ಯತೆ ಇದೆ. ಇದು ಖುಷಿ ವಿಚಾರ.
ಸುದೀಪ್ ಫ್ಯಾನ್ಸ್ ಈ ಸ್ಟೋರಿ ನೋಡ್ಲೇ ಬೇಡಿ…! ಬೇಜಾರಾಗ್ತೀರಾ…!
Date: