ಸುದೀಪ್ ಭೇಟಿಮಾಡಿ ಸಿಹಿಸುದ್ದಿ ಹಂಚಿಕೊಂಡ ಮಿಲನ ಮತ್ತು ಕೃಷ್ಣ..

Date:

ಲವ್ ಮಾಕ್ಟೈಲ್ ನಂತಹ ಸೂಪರ್ ಹಿಟ್ ಚಿತ್ರ ನೀಡಿದ ಜೋಡಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರು ಮದುವೆ ಆಗುತ್ತಿರುವ ವಿಷಯ ನಿಮಗೆಲ್ಲರಿಗೂ ತಿಳಿದೇ ಇದೆ. ಇತ್ತೀಚೆಗಷ್ಟೇ ಈ ಜೋಡಿ ಬ್ಯಾಚುಲರ್ ಪಾರ್ಟಿ ಯನ್ನು ಸಹ ಆಯೋಜನೆ ಮಾಡಿತ್ತು. ಇನ್ನು ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆಯ ದಿನ ಕೃಷ್ಣ ಮತ್ತು ಮಿಲನ ಜೋಡಿ ಸಪ್ತಪದಿ ತುಳಿಯಲಿದೆ.

 

 

ಮದುವೆಗೆ ಒಂದು ತಿಂಗಳು ಬಾಕಿ ಇರುವಾಗಲೇ ಈ ಜೋಡಿ ಸೆಲೆಬ್ರಿಟಿಗಳನ್ನು ತಮ್ಮ ಮದುವೆಗೆ ಆಹ್ವಾನಿಸುವ ಕೆಲಸಕ್ಕೆ ಕೈ ಹಾಕಿದೆ. ನಟ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿರುವ ಕೃಷ್ಣ ಮತ್ತು ಮಿಲನ ಜೋಡಿ ಲಗ್ನಪತ್ರಿಕೆಯನ್ನು ನೀಡಿ ತಮ್ಮ ಮದುವೆಗೆ ಸುದೀಪ್ ಅವರನ್ನು ಆಹ್ವಾನಿಸಿದೆ. ಇನ್ನು ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಲವ್ ಮಾಕ್ಟೈಲ್ ಚಿತ್ರದ ನಂತರ ಲವ್ ಮಾಕ್ಟೈಲ್2 ನಲ್ಲಿ ಈ ಜೋಡಿ ಬ್ಯುಸಿ ಆಗಿದೆ. ಹಾಗೂ ನಟಿ ಮಿಲನಾ ನಾಗರಾಜ್ ಅವರು ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಗೆ ನಾಯಕಿಯಾಗಿ ಸಹ ಅಭಿನಯಿಸುತ್ತಿದ್ದಾರೆ.

Share post:

Subscribe

spot_imgspot_img

Popular

More like this
Related

ಕೇಂದ್ರದ ಅರಣ್ಯ ಸಚಿವರ ಜತೆ ಮಹತ್ವದ ಮಾತುಕತೆ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರದ ಅರಣ್ಯ ಸಚಿವರ ಜತೆ ಮಹತ್ವದ ಮಾತುಕತೆ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ ನವದೆಹಲಿ:...

ಅಬಕಾರಿ ಸಚಿವರ ರಾಜೀನಾಮೆ ಪಡೆದು ತನಿಖೆ ನಡೆಸಲಿ: ಬಿ.ವೈ. ವಿಜಯೇಂದ್ರ ಒತ್ತಾಯ

ಅಬಕಾರಿ ಸಚಿವರ ರಾಜೀನಾಮೆ ಪಡೆದು ತನಿಖೆ ನಡೆಸಲಿ: ಬಿ.ವೈ. ವಿಜಯೇಂದ್ರ ಒತ್ತಾಯ ಬೆಂಗಳೂರು:...

ಗರ್ಭಾವಸ್ಥೆಯಲ್ಲಿ ಕಂಡುಬರುವ ಖಿನ್ನತೆ ತಡೆಯಲು ಈ ರೀತಿ ಮಾಡಿ!

ಗರ್ಭಾವಸ್ಥೆಯಲ್ಲಿ ಕಂಡುಬರುವ ಖಿನ್ನತೆ ತಡೆಯಲು ಈ ರೀತಿ ಮಾಡಿ! ಗರ್ಭಾವಸ್ಥೆಯಲ್ಲಿ ಮಹಿಳೆ ಅನುಭವಿಸುವ...

ತೀರ್ಪು ವಿಳಂಬಕ್ಕೆ ಸುಪ್ರೀಂ ಕೋರ್ಟ್ ಕಿಡಿ: ಹೈಕೋರ್ಟ್ಗಳ ಕಾರ್ಯವೈಖರಿಯ ಮೇಲೆ ಅಸಮಾಧಾನ

ತೀರ್ಪು ವಿಳಂಬಕ್ಕೆ ಸುಪ್ರೀಂ ಕೋರ್ಟ್ ಕಿಡಿ: ಹೈಕೋರ್ಟ್ಗಳ ಕಾರ್ಯವೈಖರಿಯ ಮೇಲೆ ಅಸಮಾಧಾನ ನವದೆಹಲಿ:...